




ಕಡಬ ಟೈಮ್ಸ್(KADABA TIMES):ಸುಳ್ಯ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಸುಳ್ಯ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಉಸ್ಮಾನ್ ಅರಂತೋಡು, ಉಪಾಧ್ಯಕ್ಷರಾಗಿ ಅಝರ್ ಜಟ್ಟಿಪಳ್ಳ, ಕಾರ್ಯದರ್ಶಿಯಾಗಿ ರಝಾಕ್ ಪೈಚಾರು, ಜೊತೆ ಕಾರ್ಯದರ್ಶಿಯಾಗಿ ಮರ್ಷಾದ್ ಬೆಳಂದೂರು, ಕೋಶಾಧಿಕಾರಿಯಾಗಿ ಹಮೀದ್ ಅಡ್ಕಾರ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಇಝ್ಝುದ್ದೀನ್ ಸುಳ್ಯ, ಶರೀಫ್ ಸೆಟ್ಯಡ್ಕ, ಸಿದ್ದೀಕ್ ಮೂಲೆ, ಶರೀಫ್ ಅಂಕತಡ್ಕ, ಅಬ್ದುಲ್ ರಹಿಮಾನ್ ರವರನ್ನು ಆಯ್ಕೆ ಮಾಡಲಾಗಿದೆ. SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಚುನಾವಣೆ ಮೂಲಕ ನಡೆಸಿಕೊಟ್ಟರು.

ಕಾರ್ಮಿಕರ ಹಕ್ಕು , ದೇಶಕ್ಕೆ ನೀಡುವ ಕೊಡುಗೆಗಳು, ಸಂಘಟಿತರಾಗಬೇಕಾದ ಅಗತ್ಯತೆ ಬಗ್ಗೆ SDTU ದ.ಕ ಜಿಲ್ಲಾಧ್ಯಕ್ಷರಾದ ಖಾದರ್ ಫರಂಗಿಪೇಟೆಯವರು ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ SDTU ಕ್ಷೇತ್ರ ಸಮಿತಿ ಉಸ್ತುವಾರಿ ಆಬಿದ್ ಪೈಚಾರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಉವೈಸ್ ಸಂಪಾಜೆ ಸ್ವಾಗತಿಸಿ, ಮುನೀರ್ ಶೈನ್ ವಂದಿಸಿದರು.