




ಕಡಬ ಟೈಮ್ಸ್(KADABA TIMES):ನಿರಂತರ ಭೂಕಂಪನದಿಂದ ಸುದ್ದಿಯಾಗುತ್ತಿರುವ ಸುಳ್ಯ ಪ್ರದೇಶಗಳಲ್ಲಿ ಇಂದು ಸಂಜೆ ೪ ಗಂಟೆಗೆ ಮತ್ತೆ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ.
ಅರಂತೋಡು, ಮರ್ಕಂಜ, ಪೆರಾಜೆ, ಚೆಂಬು, ತೊಡಿಕಾನ, ಉಬರಡ್ಕ ಮತ್ತಿತರ ಪ್ರದೇಶಗಳಲ್ಲಿ ಕಂಪನ ಆಗಿರುವುದಾಗಿ ಹಲವರು ತಿಳಿಸಿದ್ದಾರೆ.

ಅನೇಕ ಕಡೆ ದೊಡ್ಡ ಶಬ್ದದ ಅರಿವಾಗಿದ್ದರೆ, ಕೆಲವೆಡೆ ಲಘು ಕಂಪನ ಆಗಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.