




ಕಡಬ ಟೈಮ್ಸ್(KADABA TIMES):ವಿಟ್ಲ:ಅಡಿಕೆ ಹಾಳೆಯ ತಟ್ಟೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿ ನಡೆದಿದೆ.
ಬಲಿಪಗುಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಕೋ ವಿಶನ್ ಎಂಬ ಹಾಳೆ ತಟ್ಟೆ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಕೋ ವಿಶನ್ ಫ್ಯಾಕ್ಟರಿಯಿಂದ ಏಕಾ ಏಕಿ ದಟ್ಟವಾದ ಹೊಗೆ ಹೊರ ಸೂಸಲು ಆರಂಭವಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿರಿ:ನಮ್ಮ ಕಡಬಕ್ಕೆ ಹೆಮ್ಮೆ: ಹರ್ಯಾಣಾದಲ್ಲಿ 69ನೇ ಸೀನಿಯರ್ ಕಬಡ್ಡಿ ಪಂದ್ಯಾಟ : ಕರ್ನಾಟಕ ರಾಜ್ಯ ತಂಡಕ್ಕೆ ಹೊಸ್ಮಠದ ಮಹಮ್ಮದ್ ಅಫ್ರಿದಿ ಆಯ್ಕೆ
ಕಾರ್ಖಾನೆಯ ಆವರಣ ಪೂರ್ತಿ ಹೊಗೆ ಆವರಿಸುತ್ತಿದ್ದಂತೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು.ಇದೇ ವೇಳೆ ವಿಟ್ಲ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಈ ದುರ್ಘಟನೆಗೆ ಕಾರಣ ತಿಳಿದು ಬಂದಿಲ್ಲ.ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.