




ಕಡಬ ಟೈಮ್ಸ್(KADABA TIMES):ನೆಲ್ಯಾಡಿಯ ಅಭಿವೃದ್ದಿಯಲ್ಲಿ ಪ್ರಮುಖ ಪ್ರಾತ್ರವಹಿಸಿದ್ದ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಹಾಗೂ ಎಲೈಟ್ ಸಮೂಹ ಸಂಸ್ಥೆಗಳ ಸ್ಥಾಪಕ, ಹೆಸರಾಂತ ಉದ್ಯಮಿ ರಬ್ಬರ್ ವರ್ಗಿಸ್ ಎಂದೇ ಖ್ಯಾತರಾಗಿದ್ದ ಉನ್ನುಕಲ್ಲಿಂಗಲ್ ನಿವಾಸಿ ಯು.ಪಿ.ವರ್ಗೀಸ್( 80 ವ) ರವರು ಜುಲೈ 4 ರಂದು ನಿಧನರಾಗಿದ್ದಾರೆ.
ಬಹುದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಅನ್ನಮ್ಮ, ಪುತ್ರರಾದ ಶಾಜಿ, ಸೈಬು, ಸೈಜು, ಪುತ್ರಿಯರಾದ ಎಲಿನಾ, ಶೈಬಿಯವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜುಲೈ 5 ರಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.