ಹಿಂದೂ ಯುವತಿಯನ್ನು ವಿವಾಹವಾದ ಯುವಕ: ಹಿಂದೂ ಸಂಘಟನೆಗಳ ಆಕ್ರೋಶ

ಹಿಂದೂ ಯುವತಿಯನ್ನು ವಿವಾಹವಾದ ಯುವಕ: ಹಿಂದೂ ಸಂಘಟನೆಗಳ ಆಕ್ರೋಶ

Kadaba Times News

ಕಡಬ ಟೈಮ್ಸ್(KADABA TIMES):ವಿಟ್ಲ ಮೂಲದ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ವಿವಾಹವಾದ ಬಗ್ಗೆ ವರದಿಯಾಗಿದ್ದು ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.

ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕೇರಳದಲ್ಲಿ ನಿಶ್ಚಿತಾರ್ಥವಾದ ಈ ಅನ್ಯಕೋಮಿನ ಜೋಡಿ ಮೈಸೂರಿನ ರೆಜಿಸ್ಟರ್ ಆಫೀಸ್ ನಲ್ಲಿ ವಿವಾಹವಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಇದೇ ತಿಂಗಳು ಹಾಲ್ ಒಂದರಲ್ಲಿ ರಿಸೆಪ್ಶನ್ ಕೂಡ ನಡೆಸಲು ತಯಾರಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಯ ಮನೆಯವರ ಒಪ್ಪಿಗೆ ಮೇರೆಗೆ ಈ ವಿವಾಹ ನಡೆದಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಇದೊಂದು ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರ ಎಂದು ಆರೋಪಿಸಿವೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top