ಸರಣಿ ಕಳ್ಳತನ ಪ್ರಕರಣ: ಆರೋಪಿಯನ್ನು ಮಾಲು ಸಮೇತ ಪತ್ತೆ ಹಚ್ಚಿ ಬಂಧಿಸಿದ ಪುತ್ತೂರು ಪೊಲೀಸರು

ಸರಣಿ ಕಳ್ಳತನ ಪ್ರಕರಣ: ಆರೋಪಿಯನ್ನು ಮಾಲು ಸಮೇತ ಪತ್ತೆ ಹಚ್ಚಿ ಬಂಧಿಸಿದ ಪುತ್ತೂರು ಪೊಲೀಸರು

Kadaba Times News

ಕಡಬ ಟೈಮ್ಸ್(KADABA TIMES):ಪುತ್ತೂರಿನ  ಎರಡು ಸಂಸ್ಥೆಗಳಿಂದ ಬೇರೆ ಬೇರೆ ದಿನಾಂಕಗಳಂದು ಬ್ಯಾಟರಿ ಕಳ್ಳತನ ಮಾಡಿದ ಪಕ್ರರಣದ ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ‌.

ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಇಟ್ಟಿ ಪನ್ನಿಕರ್ ಬಂಧಿತ ಆರೋಪಿ.ಪುತ್ತೂರು  ನಗರ ವ್ಯಾಪ್ತಿಯಲ್ಲಿ ನಡೆದ ಈ ಸರಣಿ ಕಳ್ಳತನ ಪೊಲೀಸರಿಗೆ ತಲೆ ನೋವು ತಂದಿಟ್ಟಿತ್ತು. ನಗರ ಠಾಣಾ ವ್ಯಾಪ್ತಿಯ ದರ್ಭೆ ಬಳೊಯ ಹಿತ ಆಸ್ಪತ್ರೆ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಶ್ರೀ ಸಾಯಿ ಲಾಡ್ಜ್ ನಿಂದ ಜನರೇಟರ್ ಕದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಸುದ್ದಿಯನ್ನೂ ಓದಿರಿ:ಪುಲ್ವಾಮಾದಲ್ಲಿ ಎನ್ಕೌಂಟರ್ : ಇಬ್ಬರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು

ಇದರಲ್ಲಿ ಹಿತ ಆಸ್ಪತ್ರೆಯಲ್ಲಿ ಬ್ಯಾಟರಿ ಕಳ್ಳತನ ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ .

ಪುತ್ತೂರು ನಗರ ಠಾಣೆ ಪಿ.ಎಸ್.ಐ.ನೇತೃತ್ವದಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿ, ಸೊತ್ತು ವಶಪಡಿಸಿಕೊಂಡು ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.

 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top