




ಕಡಬ ಟೈಮ್ಸ್(KADABA TIMES):ಕಡಬ: ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.
ಕಡಬ ತಾಲೂಕು ಬೆಳಂದೂರು ಗ್ರಾಮದ ಬರಪಾಡಿ ಕೆಲಂಬೀರಿ ನಿವಾಸಿ ನಾರಾಯಣ ಆಚಾರಿ (66 ವ) ಮೃತಪಟ್ಟ ವ್ಯಕ್ತಿ.
ಈ ಸುದ್ದಿಯನ್ನೂ ಓದಿರಿ:ವಾಹನದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ತಮಾಷೆ :ವ್ಯಾನಿನಿಂದ ಇಳಿಸಿ ಯುವಕನಿಗೆ ಧರ್ಮದೇಟು!

ಇವರು ಮನೆಯಿಂದ ಹೊರಗೆ ಹೋದವರು ಬಾರದೆ ಕಾಣೆಯಾಗಿದ್ದರು. ಕುಡಿತದ ಚಟವಿದ್ದ ಇಅವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ ಎನ್ನಲಾಗಿದೆ.
ಕಾಣೆಯಾದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಇದೀಗ ಅವರ ಮೃತ ದೇಹವು ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.ಆಕಸ್ಮಿಕವಾಗಿ ಕೆರೆಗೆ ಜಾರಿ ಮೃತ ಪಟ್ಟಿರಬೇಕೆಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.