ಕಡಬದಲ್ಲಿ ದಲಿತ್ ಸೇವಾ ಸಮಿತಿಯ ತಾಲೂಕು ಶಾಖೆ ಪುನರ್ ರಚನೆ:ಅಧ್ಯಕ್ಷರಾಗಿ ಯಶವಂತ್ ದೇರೋಡಿ, ಕಾರ್ಯದರ್ಶಿಯಾಗಿ ಚಿದಾನಂದ ಖಂಡಿಗ ಆಯ್ಕೆ

ಕಡಬದಲ್ಲಿ ದಲಿತ್ ಸೇವಾ ಸಮಿತಿಯ ತಾಲೂಕು ಶಾಖೆ ಪುನರ್ ರಚನೆ:ಅಧ್ಯಕ್ಷರಾಗಿ ಯಶವಂತ್ ದೇರೋಡಿ, ಕಾರ್ಯದರ್ಶಿಯಾಗಿ ಚಿದಾನಂದ ಖಂಡಿಗ ಆಯ್ಕೆ

Kadaba Times News

ಕಡಬ ಟೈಮ್ಸ್(KADABA TIMES):ಕಡಬ: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ  ತಾಲೂಕು ಶಾಖೆಯ ಪುನರ್ ರಚನೆ ಸಭೆಯು ಕಡಬದ ಅಂಬೇಡ್ಕರ್ ಭವನದಲ್ಲಿ ಜುಲೈ ೩ ರಂದು ನಡೆಯಿತು.

ಸಭೆ ಉದ್ಘಾಟಿಸಿ  ಮಾತನಾಡಿದ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಪರಿಶಿಷ್ಟ ಜಾತಿ /ಪಂಗಡದ ಸಾಮುದಾಯಿಕ ಹಿತಾಸಕ್ತಿಯೇ ನಮಗೆ ಮುಖ್ಯ, ಸ್ವಾರ್ಥ ಭಾವನೆ ಬಿಟ್ಟು ಸಂಘಟನೆ ಬಲಗೊಳಿಸಬೇಕೆಂದರು.  ಜಿಲ್ಲಾಧ್ಯಕ್ಷ ಚಂದ್ರಶೇಖರ ವಿಟ್ಲ ಮಾತನಾಡಿ ಗ್ರಾಮ ಮಟ್ಟದಲ್ಲಿ ಸಂಘಟನೆಯ ಅಗತ್ಯವನ್ನು ಮನವರಿಕೆ ಮಾಡಿ  ಮೂಲಭೂತ ಅಗತ್ಯವನ್ನು  ಮುಟ್ಟಿಸಲು ಸಂಘಟನೆ ಕೈಜೋಡಿಸಬೇಕೆಂದರು.ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ  ಶುಭ ಹಾರೈಸಿದರು.

ನೂತನ ಪದಾಧಿಕಾರಿಗಳ ಆಯ್ಕೆ :  ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ  ನೂತನ ಪದಾಧಿಕಾರಿಗಳ ಆಯ್ಕೆ  ನಡೆದಿದ್ದು ಗೌರವಾಧ್ಯಕ್ಷರಾಗಿ ಅಣ್ಣು ನಾಯ್ಕ ಪೆರಾಬೆ,  ಅಧ್ಯಕ್ಷರಾಗಿ    ಯಶವಂತ್ ದೇರೋಡಿ , ಉಪಾಧ್ಯಕ್ಷರಾಗಿ ಕೇಶವ ಕುರಿಯಡ್ಕ, ಮೋಹನ್ ನಾಯ್ಕ್ ಶಿಶಿಲ, ಪ್ರಧಾನ ಕಾರ್ಯದರ್ಶಿಯಾಗಿ   ಚಿದಾನಂದ ಖಂಡಿಗ , ಜೊತೆ ಕಾರ್ಯದರ್ಶಿ ಮಹಾಬಲ ಪಡುಬೆಟ್ಟು ಖಜಾಂಜಿಯಾಗಿ ಬಾಬು ದೇರೋಡಿ , ಸಂಘಟನಾ ಕಾರ್ಯದರ್ಶಿ ಉಮೇಶ್ ಅಲೆಕ್ಕಾಡಿ ಆಯ್ಕೆಯಾದರು.

ಸಭೆಯಲ್ಲಿ  ಜಿಲ್ಲಾ ಉಪಾಧ್ಯಕ್ಷ ಸುರೇಶ್ ತೋಟಂತಿಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೀನ ಮೂಲೆತ್ತ ಮಜಲು, ಮಾಜಿ ಅಧ್ಯಕ್ಷ ಕೇಶವ ಕುಪ್ಲಾಜೆ ಸೇರಿದಂತೆ ಪ್ರಮುಖರು ಹಾಜರಿದ್ದರು .ಸಂದಿಪ್ ಪಾಂಜೋಡಿ ಕಾರ್ಯಕ್ರಮ ನಿರ್ವಹಿಸಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top