




ಕಡಬ ಟೈಮ್ಸ್(KADABA TIMES):ಕಡಬ/ಕೊಯಿಲ: ಮುಸ್ಲಿಂ ಸ್ನೇಹಿತೆಯ ಮನೆಗೆ ಹಬ್ಬಕ್ಕೆಂದು ಹೋಗಿದ್ದ ಹಿಂದೂ ಯುವತಿಗೆ ಹಾಗೂ ಸ್ನೇಹಿತೆಯ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಹಿಂದೂಪರ ಸಂಘಟನೆಯ ನಾಲ್ವರ ವಿರುದ್ಧ ಕಡಬ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುದರ್ಶನ್ ಗೋಗಡಿ, ಪ್ರಶಾಂತ್ ಕೆ ಕೊಯಿಲ, ತಮ್ಮು ಕಲ್ಕಾಡಿ, ಪ್ರಸಾದ್ ಕೊಯಿಲ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮಕುಂಜದ ಆತೂರು ಸಮೀಪದ ಕುದ್ಲೂರು ಎಂಬಲ್ಲಿಯ ಮುಸ್ಲಿಂ ಸ್ನೇಹಿತೆಯ ಮನೆಗೆ ಈದ್ ಹಬ್ಬದಂದು ಹಿಂದೂ ಯುವತಿ ಭೇಟಿ ನೀಡಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕೆ ಭೇಟಿ ನೀಡಿದ ಮನೆಯ ಬಳಿ ಬಂದು ಹಿಂದೂ ಯುವತಿಗೆ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ನಡೆಸಿ ಮುಸ್ಲಿಂ ಸ್ನೇಹಿತೆಯ ಮನೆಯವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ಮುಸ್ಲಿಂ ಯುವತಿಯ ಪೋಷಕರು ದೂರು ನೀಡಿದ್ದರು. ದೂರಿನನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.