




ಕಡಬ ಟೈಮ್ಸ್(KADABA TIMES):ಕಾಡುಕೋಣದ ಮೃತ ದೇಹವೊಂದು ನದಿಯಲ್ಲಿ ತೇಲಿ ಬಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲುವಿನಲ್ಲಿ ಕಂಡುಬಂದಿದೆ.
ಸುಲ್ಯೋಡಿ ಹಿತ್ತಿಲ ಪೇಲ ಭಾಗದಿಂದ ಸವಣಾಲು ಮೂಲಕ ವೇಣೂರು ಕಡೆಗೆ ಹರಿದು ಬರುವ ಫಲ್ಗುಣಿ ನದಿಯ ಹೆಬ್ಬರಹಿತ್ತಿಲು ಎಂಬಲ್ಲಿ ಕಾಡುಕೋಣದ ಮೃತದೇಹ ತೇಲಿ ಬಂದಿದೆ.

ಇದನ್ನೂ ಓದಿ:ಕೋಡಿಂಬಾಳ:ಪೆಲತ್ತೋಡಿಯಲ್ಲಿ ಚರಡಿ ಸಮಸ್ಯೆ :ಗ್ರಾಮಸ್ಥರ ದೂರಿಗೆ ತ್ವರಿತವಾಗಿ ಸ್ಪಂದಿಸಿದ ಪ.ಪಂ ಮುಖ್ಯಾಧಿಕಾರಿ
ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿ ದಾಟುವ ವೇಳೆ ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.