




ಕಡಬ ಟೈಮ್ಸ್(KADABA TIMES):ಕಡಬ: ಮಹಿಳೆಯೊಬ್ಬರು ತನ್ನ ತಾಯಿ ಜೊತೆ ವಾಸಿಸುತ್ತಿದ್ದ ಮನೆ ಮೇಲೆ ಅಪಾಯಕಾರಿ ಮರದ ಕೊಂಬೆ ಬಾಗಿದ್ದು ಗ್ರಾ.ಪಂ ತೆರವುಗೊಳಿಸಿದ ಬಳಿಕ ಸ್ಥಳೀಯ ವ್ಯಕ್ತಿಗಳಿಬ್ಬರು ಮನೆಯೊಡತಿಯೊಂದಿಗೆ ವಾಗ್ವಾದ ಮಾಡಿದ ಘಟನೆ ವರದಿಯಾಗಿದೆ.
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಲಂಗೆರಿಯ ದಲಿತ ಮಹಿಳೆ ಗಿರಿಜಾ ಎಂಬವರ ಮನೆ ಮೇಲೆ ಅಪಾಯ ಕಾರಿ ಮರದ ಕೊಂಬೆ ಬಾಗಿಕೊಂಡಿತ್ತು . ಗ್ರಾ.ಪಂ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾ.ಪಂ ಅಧ್ಯಕ್ಷರು ಸ್ಥಳ ಭೇಟಿ ಮಾಡಿ ಮನೆಗೆ ಅಪಾಯ ಇರುವ ಹಿನ್ನೆಲೆಯಲ್ಲಿ ಕಾರ್ಮಿಕರ ಸಹಾಯದಿಂದ ತೆರವುಮಾಡಿದ್ದರು.

ಗ್ರಾ.ಪಂನವರು ಹೋದ ಬಳಿಕ ಸ್ಥಳೀಯ ವ್ಯಕ್ತಿಗಳಿಬ್ಬರು ಮರ ಕಡಿದ ವಿಚಾರಕ್ಕೆ ಸಂಬಂಧಿಸಿ ಮಹಿಳೆಗೆ ಕಿ ರಿಕ್ ಮಾಡಿದ್ದಾರೆ ಎನ್ನಲಾಗಿದೆ .ಹೀಗಾಗಿ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ. ಬಳಿಕ ದಾರಿಗೆ ಸ್ಥಳೀಯ ವ್ಯಕ್ತಿಗಳು ಬೇಲಿ ಹಾಕಿದ್ದರು. ನಂತರದ ಬೆಳವಣಿಗೆಯಲ್ಲಿ ಗ್ರಾಮದ ವಿಎ ಆಗಮಿಸಿ ಬೇಲಿ ತೆರವು ಮಾಡಿದ್ದರು.
ಇದಾದ ನಂತರ ವ್ಯಕ್ತಿಗಳು ಮತ್ತೆಮಹಿಳೆಗೆ ಕಿರಿಕ್ ಮಾಡಿದ್ದು ಹೀಗಾಗಿ ಈ ವಿಚಾರ ಠಾಣೆ ಮೆಟ್ಟಿಲೇರಿದೆ. ಮಹಿಳೆಗೆ ನಿಂದನೆ ಮಾಡಿದ ಇಬ್ಬರನ್ನು ಠಾಣೆಗೆ ಕರೆಸಿ ಠಾಣಾಧಿಕಾರಿ ಸಹಬಾಳ್ವೆಯ ಪಾಠ ಮಾಡಿದ್ದಾರೆ. ಬಳಿಕ ತೊಂದರೆ ಮಾಡದಂತೆ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.