ಬೆದರಿಕೆ ಎದುರಿಸುವ ಹಿಂದೂಗಳಿಗೆ ಬಜರಂಗದಳದಿಂದ ಸಹಾಯವಾಣಿ

ಬೆದರಿಕೆ ಎದುರಿಸುವ ಹಿಂದೂಗಳಿಗೆ ಬಜರಂಗದಳದಿಂದ ಸಹಾಯವಾಣಿ

Kadaba Times News

ಕಡಬ ಟೈಮ್ಸ್(KADABA TIMES):ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ‘ಪೋಸ್ಟ್‌’ ಹಂಚಿಕೊಂಡ ಕಾರಣಕ್ಕಾಗಿ  ಇಸ್ಲಾಮಿಕ್‌ ಮೂಲಭೂತವಾದಿಗಳಿಂದ ಬೆದರಿಕೆ ಎದುರಿಸುವವರ ನೆರವಿಗಾಗಿ ಹಿಂದುತ್ವವಾದಿ ಸಂಘಟನೆಯಾದ  ಬಜರಂಗ ದಳವು ಸಹಾಯವಾಣಿ ಆರಂಭಿಸಿದೆ.‘

ಟೇಲರ್‌ ಕನ್ಹಯ್ಯ ಲಾಲ್‌ ಹಾಗೂ ಉಮೇಶ್‌ ಕೊಲ್ಹೆ ಅವರ ಹತ್ಯೆ ಇಡೀ ಜಗತ್ತನೇ ಬೆಚ್ಚಿಬೀಳಿಸಿದೆ. ಮುಸ್ಲಿಂ ಮೂಲಭೂತವಾದದ ವಿಷ ದೇಶದೆಲ್ಲೆಡೆ ವೇಗವಾಗಿ ಪಸರಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ವಾತಾವರಣ ನಿರ್ಮಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ತಿಳಿಸಿದ್ದಾರೆ.

‘ಹಿಂದೂ ಬಾಂಧವರು ತಮಗೆ ಬೆದರಿಕೆ ಕರೆಗಳು ಬಂದ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಬೇಕು. ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಬಜರಂಗದಳದ ಕಾರ್ಯಕರ್ತರು ನೊಂದವರ ನೆರವಿಗೆ ಧಾವಿಸಲಿದ್ದಾರೆ.

ಬಜರಂಗದಳ ಹಾಗೂ ವಿಎಚ್‌ಪಿಯ ರಾಜ್ಯ ಘಟಕಗಳು ಶೀಘ್ರವೇ ಸಹಾಯವಾಣಿ ಸಂಖ್ಯೆ ಪ್ರಕಟಿಸಲಿವೆ’ ಎಂದು ಹೇಳಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top