




ಕಡಬ ಟೈಮ್ಸ್(KADABA TIMES):ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರದ ಮೆರವಣಿಗೆಯ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಲ್ಲಿ ಮಾತನಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಮೊದಲೇ ಸುಳ್ಯ, ಪುತ್ತೂರು ಶಾಸಕರಿಲ್ಲದೇ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದ್ದು, ಇದರಿಂದ ಬಿಜೆಪಿ ಕಾರ್ಯಕರ್ತರು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ನಂತರ ಸುಳ್ಯ ಶಾಸಕ ಅಂಗಾರ ಬೆಂಗಳೂರಿನಲ್ಲಿರುವ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಿಲ್ಲ ಎಂಬ ಕಾರಣದಿಂದ ಮೆರವಣಿಗೆಗೆ ಚಾಲನೆ ದೊರಕಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಪೈಕಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಒಬ್ಬರೇ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಪ್ರವೀಣ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಹರೀಶ್ ಪೂಂಜಾ ನಂತರ ಮೆರವಣಿಗೆಯಲ್ಲಿ ಜೊತೆಗೆ ಸಾಗುತ್ತಿದ್ದಾರೆ.ಈ ವೇಳೆ ಶಾಸಕ ಹರೀಶ್ ಪೂಂಜಾ ಅವರ ಕಾರ್ ನ ಬಳಿ ಬಂದ ಮತ್ತೊಂದು ಕಾರ್ ನ ಚಾಲಕ “ಇದರ ಲೀಡರ್ ಶಿಪ್ ನೀವೇ ತಗೋಬೇಕು ಸರ್.. ಈ ಕೊಲೆ ಇಲ್ಲಿಗೇ ನಿಲ್ಬೇಕು.. ಬೇರೆ ಯಾರ್ಗೂ ಆ ಕೆಪಾಸಿಟಿ ಇಲ್ಲ, ನೀವು ಮಾಡ್ಬೇಕು ಸರ್.. ನಮ್ಮದೇ ಸರ್ಕಾರ ಇರುವುದು, ಅಮಾಯಕರ ಮತ್ತೆ ಮತ್ತೆ ಕೊಲೆಯಾಗ್ತಿದೆ… ಇದು ಆಗ್ಬಾರ್ದು ಸರ್ ” ಎಂದು ಹತಾಶೆಯಿಂದ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.