




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ: ಇಲ್ಲಿನ ನದಿಯೊಂದರಲ್ಲಿ ಕಡವೆಯ ಮೃತ ದೇಹ ತೇಲಿ ಬಂದು ಸೇತುವೆಯ ಕೆಳಗಡೆ ಸಿಕ್ಕಿ ಹಾಕಿಕೊಂಡ ಘಟನೆ ವರದಿಯಾಗಿದೆ.
ಕನ್ನಡಿ ಹೊಳೆಯಲ್ಲಿ ನೀರು ತುಂಬಿ ಹರಿಯುತಿದ್ದು ಸೇತುವೆ ಬಳಿ ನೀರು ಸೇತುವೆ ಮುಟ್ಟುವಂತಿತ್ತು, ಅಲ್ಲಿ ಕಡವೆ ಮೃತ ದೇಹ ಸಿಕ್ಕಿಹಾಕಿಕೊಂಡಿತ್ತು. ಎರಡು ಮೂರು ದಿನಗಳ ಹಿಂದೆ ಕಡವೆ ಸತ್ತಿರುವುದಾಗಿ ಅಂದಾಜಿಸಲಾಗಿದ್ದು ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಾಣ ಸಿಕ್ಕಿದೆ.

ಸ್ಥಳೀಯರು ನೋಡಿ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸಾಮಾಜಿಕ ಮುಂದಾಳು ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ ಕಡವೆ ದೇಹವನ್ನು ಮೇಲಕೆತ್ತಲಾಗಿದೆ. ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದವರು ಜೆಸಿಬಿಯನ್ನು ಉಚಿತವಾಗಿ ನೀಡಿ ಸಹಕರಿಸಿದರು.
ಸುಬ್ರಹ್ಮಣ್ಯ ಗ್ರಾ .ಪಂ. ಕಸ ವಿಲೇವಾರಿ ವಾಹನದ ಸಹಾಯದಿಂದ ಕಳೆಬರವನ್ನು ಕಾಡಿಗೆ ಕೊಂಡೊಯ್ದು ಅಲ್ಲಿ ಹೂತು ಹಾಕಲಾಗಿದೆ ಎಂದು ತಿಳಿದು ಬಂದಿದೆ.