




ಕಡಬ ಟೈಮ್ಸ್(KADABA TIMES):ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರ್ಂದ್ಲಾಜೆ ಜುಲೈ ೩೧ ರಂದು ಭೇಟಿ ನೀಡಿದರು.
ಮನೆಯವರಿಗೆ ಸಾಂತ್ವಾನ ಹೇಳಿದ ಸಚಿವೆ ತನ್ನ ಒಂದು ತಿಂಗಳ ಸಂಬಳದ ಚೆಕ್ ಹಸ್ತಾಂತರಿಸಿದ್ದರಲ್ಲದೆ, ಬೆಂಗಳೂರಿನ ಸಂಘ ಸಂಸ್ಥೆಗಳ ನೆರವಿನೊಂದಿಗೆ 5 ಲಕ್ಷ ರೂ. ನಗದು ಹಸ್ತಾಂತರಿಸಿದರು.

ಈ ಸಂದರ್ಭ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಪ್ರಕಾಶ್, ಸಮಾಜಿ ಸಚಿವ ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಯುವ ಮೋರ್ಛಾದ ಸಹಜ್ ರೈ, ಹಿಂದೂ ಮುಖಂಡರಾದ ಅರುಣ್ ಪುತ್ತಿಲ , ಸ್ಥಳೀಯ ಪಕ್ಷದ ಪ್ರಮುಖರು ಹಾಜರಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಫ್‌ಐನವರು ಸಿರಿಯಾ, ಪಾಕಿಸ್ತಾನದಲ್ಲಿ ತರಬೇತಿ ಪಡೆದು ಭಾರತದಲ್ಲಿ ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.ರುದ್ರೇಶ್ ಕೊಲೆ ಪ್ರಕಣದಲ್ಲಿ ಪಿಎಫ್‌ಐ ಕಾರ್ಯಕರ್ತರು ಜೈಲಿನಲ್ಲಿದ್ದಾರೆ. ಇದು ಅಂತಹದ್ದೇ ಮಾದರಿಯಲ್ಲಿ ನಡೆದಿರುವುದರಿಂದ ಈ ಬಗ್ಗೆ ಕೇಂದ್ರ ಗೃಹಸಚಿವರಿಗೆ ಭೇಟಿ ಮಾಡಿ ಪತ್ರವನ್ನು ನೀಡಿದ್ದೆ. ಇದೀಗ ಪ್ರಕರಣ ಎನ್‌ಐಗೆ ವಹಿಸಲಾಗಿದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉನ್ನತೀಕರಣವಾಗಬೇಕು ಎಂದು ಇದೇ ವೇಳೆ ಹೇಳಿದರು.