




ಕಡಬ ಟೈಮ್ಸ್(KADABA TIMES):ಕಡಬ: ಕಾಡಾನೆ ಹಿಂಡೊಂದು ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಮರ ಹಾಗೂ ಸ್ಕೂಟರ್ ಗೆ ಹಾನಿ ಮಾಡಿರುವ ಘಟನೆ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ನಡೆದಿದೆ.
ಅಡೆಂಜ ನಿವಾಸಿ ಲಕ್ಷ್ಮಣ ಪೆತ್ತಲ ಹಾಗೂ ಸುಂದರ ಪೆತ್ತಲ ಎಂಬವರಿಗೆ ಸೇರಿದ 25 ಕ್ಕೂ ಹೆಚ್ಚಿನ ಅಡಿಕೆ ಗಿಡ, ಜಯಪ್ರಕಾಶ್ ಪೆತ್ತಲ ಎಂಬವರಿಗೆ ಸೇರಿದ 14 ಜೇನು ಪೆಟ್ಟಿಗೆಗೆ ಹಾನಿಯಾಗಿದೆ.

ಇದಲ್ಲದೆ ಕಿಶೋರ್ ಪಾದೆ ಎಂಬವರಿಗೆ ಸೇರಿದ ಸ್ಕೂಟರನ್ನು ಕಾಡಾನೆ ಹಿಂಡು ಹಾನಿಗೊಳಿಸಿದೆ. ಕಾಡಾನೆ ದಾಳಿಯಿಂದಾಗಿ ಪರಿಸರದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.