




ಕಡಬ ಟೈಮ್ಸ್(KADABA TIMES):ವಿವಾಹಿತ ಯುವತಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಉಳ್ಳಾಲದ ಮಿಲ್ಲತ್ ನಗರ ನಿವಾಸಿ ಜಂಶೀರಾ ( 25) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದಾಕೆ. ಸದ್ಯ ಈಕೆಯ ಪತಿ ಇರ್ಫಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪತಿ –ಪತ್ನಿ ನಡುವೆ ರಾತ್ರಿ ವೇಳೆ ಜಗಳ ನಡೆದಿದೆ ಎನ್ನಲಾಗಿದ್ದು ಆನಂತರ ಆಕೆ ಕೋಣೆಯೊಳಕ್ಕೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿರಿ:ಖಾಲಿ ಬಾಟಲಿಗೆ ತನ್ನ ಕೈಚಳಕದಲ್ಲಿ ಜೀವ ತುಂಬಿದ ಯುವ ಕಲಾವಿದೆ

ತಕ್ಷಣ ಆಕೆಯನ್ನು ಮೇಲಿಂದ ಇಳಿಸಿ ಆಸ್ಪತ್ರೆಗೆ ಕೊಂಡೊಯ್ದರೂ .ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ ಮೃತದೇಹದಲ್ಲಿ ರಕ್ತದ ಕಲೆಗಳು ಇದ್ದು, ಇದೊಂದು ಕೊಲೆ ಅನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.
ಇರ್ಫಾನ್ ಬೈಕಂಪಾಡಿಯ ಫಿಶ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು, ಎರಡು ವರ್ಷದ ಹಿಂದೆಯಷ್ಟೇ ಜಂಶೀರಾ ಜೊತೆ ವಿವಾಹವಾಗಿದ್ದನು.ದಂಪತಿಗೆ ಎಂಟು ತಿಂಗಳ ಹೆಣ್ಣು ಮಗುವಿದೆ.