ಆಲಂಕಾರು:ರಾಮಕುಂಜದ ಬಿಜೆಪಿ ಹಿರಿಯ ಕಾರ್ಯಕರ್ತ ನಿಧನ

ಆಲಂಕಾರು:ರಾಮಕುಂಜದ ಬಿಜೆಪಿ ಹಿರಿಯ ಕಾರ್ಯಕರ್ತ ನಿಧನ

Kadaba Times News

ಕಡಬ ಟೈಮ್ಸ್(KADABA TIMES):ರಾಮಕುಂಜ: ಹಳೆನೇರೆಂಕಿ ಗ್ರಾಮದ ಕೊಳಂಬೆ ನಿವಾಸಿ, ಬಿಜೆಪಿ ಹಿರಿಯ ಕಾರ್ಯಕರ್ತ ಹೊನ್ನಪ್ಪ ಗೌಡ(80ವ.)ರವರು ವಯೋಸಹಜ ಅನಾರೋಗ್ಯದಿಂದ ಜು.1ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹೊನ್ನಪ್ಪ ಗೌಡರವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು. ಹಳೆನೇರೆಂಕಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಲ್ಲಿ ಸುಮಾರು 30 ವರ್ಷ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಹಳೆನೇರೆಂಕಿಯಲ್ಲಿ ಜೀಪು ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಪ್ರತಿವರ್ಷ ನಡೆಯುವ ಆಯುಧಪೂಜೆ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು. ಟೈಲರಿಂಗ್ ವೃತ್ತಿಮಾಡುತ್ತಿದ್ದ ವೆಂಕಪ್ಪ ಗೌಡರವರು ಆರಂಭದಲ್ಲಿ ಆಲಂಕಾರಿನಲ್ಲಿ ಬಳಿಕ ಹಳೆನೇರೆಂಕಿಯಲ್ಲಿ ಟೈಲರಿಂಗ್ ಕೆಲಸ ಮಾಡಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದರು.

ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top