ಬೆಳ್ಳಾರೆ:ಜ್ಯೂಸ್ ಬಾಟಲಿಯಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ :8 ಮಂದಿಯನ್ನು ಬಂಧಿಸಿದ ಪೊಲೀಸರು

ಬೆಳ್ಳಾರೆ:ಜ್ಯೂಸ್ ಬಾಟಲಿಯಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ :8 ಮಂದಿಯನ್ನು ಬಂಧಿಸಿದ ಪೊಲೀಸರು

Kadaba Times News

ಕಡಬ ಟೈಮ್ಸ್(KADABA TIMES):ಸುಳ್ಯ/ಬೆಳ್ಳಾರೆ: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ನಡೆಸಿದ ಆರೋಪದಲ್ಲಿ ಎಂಟು ಮಂದಿಯನ್ನು ಬೆಳ್ಳಾರೆ ಠಾಣೆಯ ಪೊಲೀಸರು ಜು. 20ರಂದು ವಶಕ್ಕೆ ಪಡೆದಿದ್ದಾರೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಮಸೂದ್ ಬಿ. (18) ಗಂಭೀರ ಗಾಯಗೊಂಡಿರುವವರು.

ಮಸೂದ್ ತಿಂಗಳ ಹಿಂದೆ ಸುಳ್ಯದ ಕಳಂಜಕ್ಕೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಜು. 19ರ ಸಂಜೆ ಸುಧೀರ ಎಂಬಾತನಿಗೆ ಮಸೂದ್ ಅಂಗಡಿ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಮಸೂದ್ ಸುಧೀರನಿಗೆ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿರಿ:ಬೆಳ್ಳಾರೆಯಲ್ಲಿ ಮುಸ್ಲಿಂ ಯುವಕನಿಗೆ ಮಾರಣಾಂತಿಕ ಹಲ್ಲೆ ಘಟನೆ:ಎಸ್‌ಡಿಪಿಐ ಖಂಡನೆ,ತಪ್ಪಿತಸ್ಥರನ್ನು ಬಂಧಿಸಲು ಒತ್ತಾಯ

ಅಭಿಲಾಷ್, ಸುನಿಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಈ ವಿಚಾರವನ್ನು ಪೆಲತ್ತಡ್ಕದ ಇಬ್ರಾಹಿಂ ಶಾನೀಫ್ಗೆ ತಿಳಿಸಿ, ವಿಚಾರವನ್ನು ಮಾತನಾಡಿ ಇತ್ಯರ್ಥಗೊಳಿಸುವ, ಮಸೂದ್ನನ್ನು ಜತೆಗೆ ಕರೆ ತನ್ನಿ ಎಂದಿದ್ದರು. ಅದರಂತೆ ಅವರು ಸೂಚಿಸಿದ ಸ್ಥಳಕ್ಕೆ ಮಸೂದ್ನನ್ನು ರಾತ್ರಿ 11 ಗಂಟೆಗೆ ಕರೆದುಕೊಂಡು ಬಂದಿದ್ದ ವೇಳೆ ಹಲ್ಲೆ ಮಾಡಿದ್ದಾರೆ.

ಅಭಿಲಾಷ್ ಎಂಬಾತ ಸ್ಥಳದಲ್ಲಿದ್ದ ಖಾಲಿ ಜ್ಯೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಮಸೂದ್ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಹುಡುಕಾಟ ನಡೆಸಿದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದನು. ಗಾಯಾಳುವನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಅನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿರಿ:ಕಡಬ:ಸಾಮಾನ್ಯ ಕುಟುಂಬದ ವ್ಯಕ್ತಿಗೆ ಒಲಿದ ಕರ್ನಾಟಕ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಹುದ್ದೆ

ಮಸೂದನನ್ನು ಕರೆಸಿ ಕೊಲೆ ಮಾಡುವ ಉದ್ದೇಶದಿಂದ ಕರೆಸಿ ಹಲ್ಲೆ ಮಾಡಿದ್ದಾರೆಂದು ಇಬ್ರಾಹಿಂ ಶಾನೀಫ್ ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top