




ಕಡಬ ಟೈಮ್ಸ್(KADABA TIMES):ಪಂಜ: ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಬೋಗಾಯನಕೆರೆ ಅಭಿವೃದ್ಧಿ ಕಾರ್ಯ ಅಂದಾಜು ರೂ. 2 ಕೋಟಿ ಅನುದಾನದಲ್ಲಿ ನಡೆಯುತ್ತಿದ್ದು, ಕೆರೆಯ ಆವರಣ ತಡೆಗೋಡೆ ಕುಸಿದು ಬಿದ್ದಿದೆ.
ಕೆರೆಯ ಹೂಳೆತ್ತುವ ಕಾರ್ಯ ಈಗಾಗಲೇ ಪೂರ್ಣ ಹಂತದಲ್ಲಿದ್ದು, ಕೆರೆಯ ಸುತ್ತ ಮಣ್ಣು ಹಾಕಿ ಆವರಣ ತಡಗೋಡೆಗೆ ಕಲ್ಲು ಹಾಸಲಾಗಿದೆ. ಆದರೆ ಮಳೆ ಬರುತ್ತಿದ್ದಂತೆ ಒಂದೊಂದೇ ಭಾಗದಿಂದ ಕಲ್ಲು ಮಣ್ಣು ಸಮೇತ ಜಾರಿ ಕೆರೆಗೆ ಬೀಳುತ್ತಿದೆ.

ಈ ಸುದ್ದಿಯನ್ನೂ ಓದಿರಿ:ಅಡಿಕೆ ಧಾರಣೆ ಏರಿಕೆ ನಿರೀಕ್ಷೆ | ಮುಂದಿನ ವಾರ 10 ರೂಪಾಯಿ ಏರಿಕೆಯಾಗುತ್ತಾ?
ಭೋಗಾಯನಕೆರೆ ಕಾಲನಿ ನಿವಾಸಿಗಳ ಮನೆಗೆ ತೆರಳುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ನಡೆದುಕೊಂಡು ಹೋಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಕಾಲನಿ ನಿವಾಸಿಗಳು ಅಸಮದಾನ ವ್ಯಕ್ತಪಡಿಸಿದ್ದಾರೆ. ಕಳಪೆ ಕಾಮಗಾರಿಯಿಂದಾಗಿ ಈ ರೀತಿಯಾಗಿದೆಯೆಂದು ಊರವರು ಆರೋಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದೆ.