




ಕಡಬ ಟೈಮ್ಸ್(KADABA TIMES):ಎಲ್ ಪಿ ಜಿ ದರ ಏರಿಕೆ, ಇಳಿಕೆ ಗ್ರಾಹಕರನ್ನು ಕಂಗಾಲಾಗಿಸಿದ್ದು ಮತ್ತೆ ಮತ್ತೆ ಕೇಂದ್ರ ಸರ್ಕಾರ ಶಾಕ್ ನೀಡುತ್ತಲೇ ಬಂದಿದೆ.
ಇದೀಗ ಅಡುಗೆ ಅನಿಲ ದರವು ಒಂದು ಸಾವಿರ ರೂಪಾಯಿಯವರೆಗೂ ದಾಟಿದ್ದು, ಈ ಬೆಲೆ ಏರಿಕೆಗೆ ಕೊಂಚ ರಿಲೀಫ್ ಎಂಬಂತೆ ಕೇಂದ್ರ ಸರ್ಕಾರ ಎಲ್ಪಿಜಿ ಸಬ್ಸಿಡಿ ಘೋಷಣೆ ಮಾಡಿತ್ತು ಆದರೆ ಇದೀಗ ಎಲ್ ಪಿಜಿ ಸಬ್ಸಿಡಿ ನಿಯಮವನ್ನೇ ಬದಲಾವಣೆ ಮಾಡಲಾಗಿದೆ.

ಎಲ್ ಪಿಜಿ ಸಬ್ಸಿಡಿ ಸೀಮಿತ ಫಲಾನುಭವಿಗಳಿಗೆ ಮಾತ್ರ ಲಭ್ಯವಿದ್ದು ಉಳಿದ ಬಳಕೆದಾರರು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ . ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದ ಒಂಬತ್ತು ಕೋಟಿ ಬಡ ಮಹಿಳೆಯರು ಮತ್ತು ಇತರ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲದ ಮೇಲೆ ಎಲ್ ಪಿಜಿ ಸಬ್ಸಿಡಿ ಲಭ್ಯವಿದೆ