ಕಡಬ: ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದ ಶಿರಾಡಿ ಪಿಡಿಒ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು

ಕಡಬ: ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದ ಶಿರಾಡಿ ಪಿಡಿಒ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು

Kadaba Times News

ಕಡಬ ಟೈಮ್ಸ್(KADABA TIMES):ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್‌ರನ್ನು ಕರ್ತವ್ಯ ಲೋಪ ಹಿನ್ನೆಲೆ ಅಮಾನತುಗೊಳಿಸಿ ದ.ಕ ಜಿಲ್ಲಾ ಪಂಚಾಯತ್‌ ಸಿಇಒ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ಲೋಪದ ಕಾರಣಕ್ಕಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ದೂರಿನ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ .ಗುಂಡ್ಯದ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರ ನೇಮಕಾತಿಯಲ್ಲಿ ಕರ್ತವ್ಯ ಲೋಪ, ಅಂಗಡಿ ಕಟ್ಟಡಗಳನ್ನು ಏಲಂ ಮಾಡುವ ಸಂದರ್ಭ ನಿಯಮಗಳ ಉಲ್ಲಂಘನೆ, ಅಂಗವಿಕಲರ ನಿಧಿಯನ್ನು ನಿಯಮಾನುಸಾರ ಪಾವತಿ ಮಾಡದಿರುವುದು, ಸಿಸಿ ಕ್ಯಾಮರಾ ಖರೀದಿಯ ಸಂದರ್ಭ ದರ ಪಟ್ಟಿ, ಸಾರ್ವಜನಿಕ ಸಂಗ್ರಹಣೆಯಲ್ಲಿ  ಪಾರದರ್ಶಕತೆ ಪಾಲಿಸದಿರುವುದು, ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಕೋವಿಡ್ ನಿರ್ವಹಣೆಗೆ ಬಿಡುಗಡೆಗೊಂಡ ಸರಕಾರದ ಮೊತ್ತವನ್ನು ನಿರ್ದಿಷ್ಠ ಉದ್ದೇಶಕ್ಕೆ ಬಳಸದೇ ಏಕಪಕ್ಷೀಯವಾಗಿ ಖರ್ಚು ಮಾಡಿರುವುದು ,ಹೈ ಮಾಸ್ಕ್ ಸೋಲಾರ್ ಅಳವಡಿಕೆಯ ಕಾಮಗಾರಿಯಲ್ಲಿ ಇ ಟೆಂಡರ್ ಕರೆಯದೇ ಕರ್ತವ್ಯ ಲೋಪ, ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆ, ವಿದ್ಯುತ್ ಇಲಾಖೆಗೆ ಪಾವತಿಸಬೇಕಾದ ಮೀಟರ್ ಡೆಪಾಸಿಟ್ ಮೊತ್ತವನ್ನುಎಲೆಕ್ಟ್ರೀಕಲ್ ಅಂಗಡಿಯವರಿಗೆ ಪಾವತಿಸಿ ಕರ್ತವ್ಯ ಲೋಪವೆಸಗಿರುವುದಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಶಿಸ್ತು ಪ್ರಾಧಿಕಾರವು ಅಮಾನತು ಆದೇಶವನ್ನು ಹೊರಡಿಸಿದೆ.

ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿರುವ ಪಿಡಿಒ ವೆಂಕಟೇಶ್ ಅವರು,  ನನ್ನ ಮೇಲೆ ಬಂದಿದ್ದ ಆರೋಪ ನಿರಾಕರಿಸಿ ತಂಡಕ್ಕೆ ಸಮರ್ಪಕ ದಾಖಲೆ ನೀಡಿದರೂ ಯಾವುದನ್ನೂ ಪರಿಗಣಿಸಿಲ್ಲ, ಆರೋಪಗಳಿಗೆ ಸಂಬಂಧಿಸಿದಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಯಾವುದೇ ವರದಿ ಪಡೆದುಕೊಂಡಿರುವುದಿಲ್ಲ.ಏಕಾಏಕಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.  ಶಿರಾಡಿಗೆ ವರ್ಗಾವಣೆಯಾಗಿ ಆರು ತಿಂಗಳಲ್ಲಿ ಮಿತ್ತಬಾಗಿಲಿಗೆ ವರ್ಗಾಯಿಸಿದ್ದರು.ಈ ಕ್ರಮವನ್ನು ಪ್ರಶ್ನಿಸಿ ನಾನು ಕೆಇಟಿ ಮೂಲಕ ಕಾನೂನು ಹೋರಾಟ ಮಾಡಿದ್ದೆ.   ಶಿರಾಡಿ ಗ್ರಾ.ಪಂ ನಲ್ಲಿ  2020-11ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಮಾಡಿರುವ ಸಾಧನೆಗಾಗಿ ಅತ್ಯುತ್ತಮ  ಪಂಚಾಯತ್  ಅಭಿವೃದ್ಧಿ ಅಧಿಕಾರಿ’ ರಾಜ್ಯ ಮಟ್ಟದ ಪ್ರಶಸ್ತಿಯ ನನಗೆ ಬಂದಿದೆ.  2011-12ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಸರಕಾರ ನಿಗದಿಪಡಿಸಿದ ಗುರಿಗಿಂತ ದೊಡ್ಡಟ್ಟು  ಸಾಧನೆಯಾಗಿದ್ದು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಬಂದಿದೆ.  ಅಭಿವೃದ್ಧಿ ಕೆಲಸ ಮಾಡಿದ್ದನ್ನು ಗಣನೆಗೆ ತೆಗೆದುಕೊಳ್ಳದೆ ರಾಜಕೀಯ ಒತ್ತಡಕ್ಕೆ ಮಣಿದು  ಸೇವೆಯಿಂದ ಅಮಾನತು ಮಾಡಲಾಗಿದೆ ಎಂದಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top