




ಕಡಬ ಟೈಮ್ಸ್(KADABA TIMES): ಕರ್ತವ್ಯದಲ್ಲಿದ್ದ ವೇಳೆಯೇ ಗ್ರಾಮ ಸಹಾಯಕರೊಬ್ಬರು ಹೃದಯಾಘಾತ ದಿಂದ ನಿಧನರಾದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ.
ಮೇಲಂತಬೆಟ್ಟು,ಸವಣಾಲು, ಮುಂಡೂರು ಗ್ರಾಮದ ಗ್ರಾಮಸಹಾಯಕರಾಗಿದ್ದ ಸುಂದರ್ ಗೌಡ (44) ಮೃತರಾದವರು.
ಗ್ರಾಮ ಸಹಾಯಕ ಸುಂದರಗೌಡ ಮತ್ತು ಗ್ರಾಮಲೆಕ್ಕಿಗ ಶಿವಕುಮಾರ್ ರವರು ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗ್ರಾಮಲೆಕ್ಕಿಗ ಶಿವಕುಮಾರ್ ಅವರು ಪಕ್ಕದಲ್ಲಿರುವ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ಹೋಗಿ ವಾಪಸ್ ಬಂದಾಗ ಸುಂದರ ಗೌಡ ರಾಬರಿ ಕುರ್ಚಿಯಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ.

ತಕ್ಷಣ ಹೊರಗಡೆ ಇದ್ದ ಮುಂಡೂರು ಗ್ರಾಮದ ಸದಸ್ಯರೊಬ್ಬರು ತನ್ನ ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಸುಂದರ್ ಗೌಡ ನಿಧನಹೊಂದಿದ್ದಾರೆ.
ವಿಚಾರ ತಿಳಿದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬ್ಬಂದಿ, ತಹಶೀಲ್ದಾರ್, ಗ್ರಾಮಲೆಕ್ಕಿಗ, ಗ್ರಾಮಸಹಾಯಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.