ಸುಬ್ರಹ್ಮಣ್ಯ:ಡಿಸಿ ಸೂಚಿಸಿದರೂ ಮರು ನೇಮಕಗೊಳ್ಳದ ಕೆಲಸಗಾರರು: ಕಾರ್ಯನಿರ್ವಹಣಾಧಿಕಾರಿ ಕಛೇರಿ ಮುಂದೆ ಧರಣಿ

ಸುಬ್ರಹ್ಮಣ್ಯ:ಡಿಸಿ ಸೂಚಿಸಿದರೂ ಮರು ನೇಮಕಗೊಳ್ಳದ ಕೆಲಸಗಾರರು: ಕಾರ್ಯನಿರ್ವಹಣಾಧಿಕಾರಿ ಕಛೇರಿ ಮುಂದೆ ಧರಣಿ

Kadaba Times News

ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸ ಕಳೆದುಕೊಂಡ  27 ಜನ ಪಂಚಪರ್ವದ ಕೆಲಸದವರು ಜೂ.೧೧ ರಂದು ಕಾರ್ಯನಿರ್ವಹಣಾಧಿಕಾರಿ  ಕಚೇರಿ ಧರಣಿ ಆರಂಭಿಸಿದ್ದಾರೆ.

ಕಳೆದ 3 ತಿಂಗಳ ಹಿಂದೆ ಕಾರ್ಯನಿರ್ವಾಹಣಾಧಿಕಾರಿ ನ ಅವರು 27 ಜನ ಪಂಚಪರ್ವದ ಕೆಲಸ ಗಾರರನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದರು. ಈ ಬಗ್ಗೆ ಆಡಳಿತ ಮಂಡಳಿ ಕೆಲಸಗಾರರನ್ನು ಮತ್ತೆ ತೆಗೆದು ಕೊಲ್ಲಬೇಕೆಂಬ ನಿರ್ಣಯ ಮಾಡಿದ್ದು, ಅದರಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು.

ಇತ್ತೀಚೆಗೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಯವರು ಮಾಸ್ಟರ್ ಪ್ಲಾನ್ ಸಭೆಯಲ್ಲಿ ಪಂಚಪರ್ವದ ಕೆಲಸದವರನ್ನು ಮತ್ತೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಇದಾಗಿ ಎರಡು ವಾರ ಕಳೆದರೂ  ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಯಾವುದೇ ಸೂಚನೆ ಬರದಿರುವ ಕಾರಣ  ಪಂಚಪರ್ವದ ಕೆಲಸದವರು   ಬೆಳಗ್ಗಿನಿಂದ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ .

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top