




ಕಡಬ ಟೈಮ್ಸ್(KADABA TIMES):ಕಡಬ:ಕಿರು ಸೇತುವೆ ಮೇಲ್ಬಾಗದಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾವುದನ್ನು ಗಮನಿಸಿದ ಪ.ಪಂ ಮುಖ್ಯಾಧಿಕಾರಿ ಕಾರ್ಮಿಕರನ್ನು ಕರೆಸಿ ಖುದ್ದು ತಾವೇ ನಿಂತು ಕಾರ್ಮಿಕರ ಮೂಲಕ ಅವ್ಯವಸ್ಥೆಯನ್ನು ಸರಿಪಡಿಸಿದ ಘಟನೆ ಜೂ.18 ರಂದು ನಡೆದಿದೆ.
ಕಡಬ ಪ.ಪಂ ಮುಖ್ಯಾಧಿಕಾರಿ ಫಕಿರ ಮೂಲ್ಯ ಅವರು ಕೋಡಿಂಬಾಳಕ್ಕೆ ಆಗಮಿಸಿ ವಾಪಾಸು ಕಡಬದತ್ತ ತೆರಳುತ್ತಿದ್ದರು.ಈ ವೇಳೆ ಎಡೆಬಿಡದೆ ಸುರಿದ ಮಳೆಗೆ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಬಳಿಯ ಸಾರಕರೆ ಎಂಬಲ್ಲಿ ಕಿರು ಸೇತುವೆ ಮೇಲೆಯೇ ಅಧಿಕ ಪ್ರಮಾಣದಲ್ಲಿ ನೀರು ನಿಂತಿತ್ತು.

ಇದನ್ನು ಗಮನಿಸಿ ಪ.ಪಂ ಮುಖ್ಯಾಧಿಕಾರಿ ಕೂಡಲೇ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಿದ್ದರು.ಮೇಲಾಧಿಕಾರಿಗಳ ಸೂಚನೆ ಮೇರೆಗೆ ಜಡಿ ಮಳೆಯ ನಡುವೆಯೂ ಕಾರ್ಮಿಕರು ಕೆಲಸ ನಿರ್ವಹಿಸಿದರು.
ಮುಖ್ಯಾಧಿಕಾರಿಯ ಕ್ರಮಕ್ಕೆ, ಕಾರ್ಮಿಕರ ಶ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.