ಕಡಬ: ಹಳೆ ಸ್ಟೇಷನ್ ಜಂಕ್ಷನ್ ಬಳಿ ರಸ್ತೆಯಲ್ಲಿ ಹೊಂಡ-ಗುಂಡಿ: ದುರಸ್ತಿಗೆ ಆಗ್ರಹ

ಕಡಬ: ಹಳೆ ಸ್ಟೇಷನ್ ಜಂಕ್ಷನ್ ಬಳಿ ರಸ್ತೆಯಲ್ಲಿ ಹೊಂಡ-ಗುಂಡಿ: ದುರಸ್ತಿಗೆ ಆಗ್ರಹ

Kadaba Times News

ಕಡಬ ಟೈಮ್ಸ್(KADABA TIMES):ಕಡಬ ಪಟ್ಟಣ ಸಮೀಪದ ಹಳೆ ಸ್ಟೇಷನ್ ಜಂಕ್ಷನ್ ಬಳಿಯಿಂದ ಕಲ್ಲುಗುಡ್ಡೆ ಸಂಪರ್ಕಿಸುವ ರಸ್ತೆಯಲ್ಲಿ ಡಾಮರು ಕಿತ್ತು ಹೊಂಡ ಗುಂಡಿ ನಿರ್ಮಾಣಗೊಂಡಿದ್ದರೂ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ಈ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆ ಸ್ಟೇಷನ್ –  ಕಲ್ಲುಗುಡ್ಡೆ ಸಂಪರ್ಕ ರಸ್ತೆಯ ಹಳೆ ಸ್ಟೇಷನ್ ಮರದ ಮಿಲ್ ಬಳಿ ರಸ್ತೆ ತೀರ ದುಸ್ತರ ಗೊಂಡಿದೆ. ಡಾಮರು‌ ಕಿತ್ತು ಹೋಗಿ ಹೊಂಡ ಗುಂಡಿ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ ದುರಸ್ತಿ ನೆಡೆದಿಲ್ಲ ಎಂಬ ದೂರು ವ್ಯಕ್ತವಾಗಿದೆ.

ಮಳೆಗಾಲ ಈಗಾಗಲೇ  ಆರಂಭವಾಗಲಿದ್ದು, ಈ ವೇಳೆ ಗುಂಡಿಯಲ್ಲಿ ನೀರು ನಿಂತು ಗುಂಡಿ ಕಾಣಿಸದೇ ವಾಹನ ಸವಾರರು ಎಡವಿ ಬಿದ್ದು ಅಪಘಾತ ಸಂಭವಿಸುವ  ಆತಂಕ ವ್ಯಕ್ತವಾಗಿದೆ.  ಅಲ್ಲದೇ ಅಲ್ಲೇ ಹಂಪ್ಸ್ ಕೂಡ ಇದ್ದೂ ಅದೂ ಗಮನಕ್ಕೆ ಬರದೆ ಇರುವುದಿಂದ ಸವಾರರು ಸಂಕಷ್ಟ ಅನುಭವಿಸಬೇಕಿದೆ. ಶೀಘ್ರ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top