ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

Kadaba Times News

ಕಡಬ ಟೈಮ್ಸ್(KADABA TIMES):ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಜ್ವರಕ್ಕೆ ಯುವಕನೋರ್ವ ಬಲಿಯಾದ ಘಟನೆ ಜೂನ್ 9 ರಂದು ಬಂಟ್ವಾಳದ ವಾಮದಪದವು ಎಂಬಲ್ಲಿ ನಡೆದಿದೆ.

ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ (31) ಮೃತಪಟ್ಟ ಯುವಕ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 9 ರಂದು ಸಾವನ್ನಪ್ಪಿದ್ದಾರೆ.

ಸಂದೀಪ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸಿದ್ದಕಟ್ಟೆ ರೋಟರಿ ಸದಸ್ಯ ಹಾಗೂ ವಾಮದಪದವು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು.

ಇತ್ತೀಚಿಗೆ ಮದುವೆಯಾಗಿದ್ದು ಒಂದು ವರ್ಷ ಮಗು ,ಪತ್ನಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ಸುಮಾರು 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾ. ನವೀನ್ ಚಂದ್ರ ಕುಲಾಲ್ ಮಂಗಳೂರು ಅವರು ಮಾಹಿತಿ ನೀಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top