2008ರಲ್ಲಿ ನಡೆದ ಅಪಘಾತ ಪ್ರಕರಣ: ಬಸ್‌ ಚಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ ಸುಳ್ಯ ಕೋರ್ಟ್

2008ರಲ್ಲಿ ನಡೆದ ಅಪಘಾತ ಪ್ರಕರಣ: ಬಸ್‌ ಚಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ ಸುಳ್ಯ ಕೋರ್ಟ್

Kadaba Times News

ಕಡಬ ಟೈಮ್ಸ್(KADABA TIMES):ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾಗಿ ಸವಾರೆ ಗಾಯಗೊಂಡಿದ್ದ ಪ್ರಕರಣದ ಆರೋಪಿ ಬಸ್‌ ಚಾಲಕನಿಗೆ ಸುಳ್ಯ ನ್ಯಾಯಾಲಯದಿಂದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ

ಬೈತಡ್ಕ ಸಮೀಪ 2008ರ ಜೂ. 10ರಂದು ಜಾಲ್ಸೂರಿನಿಂದ  ಸುಳ್ಯದತ್ತ  ಡಿಯೋ ಸ್ಕೂಟಿ ವಾಹನದಲ್ಲಿ ಬರುತ್ತಿದ್ದ ಜಾಲ್ಸೂರಿನ  ಮಹಿಳೆಗೆ ಬಸ್‌ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಕುರಿತು ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ ಬಸ್‌ ಚಾಲಕ ವಿ.ಕೆ. ಮಹಮ್ಮದ್‌ ವಿರುದ್ಧ ಅಂದಿನ ಸಹಾಯಕ ಎಸ್‌ಐ ಭಾಸ್ಕರ ಪ್ರಸಾದ್‌ ದೂರು ದಾಖಲಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ತಿರುವು ರಸ್ತೆಯಲ್ಲಿ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದರಿಂದ ಅಪಘಾತ ಸಂಭವಿಸಿದೆ ಎಂದು ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್‌ ಅವರು ಹೇಳಿ ಶಿಕ್ಷೆ ಪ್ರಕಟಿಸಿದ್ದಾರೆ.  ಆರೋಪಿಗೆ ಕಲಂ 279ರ ಅಪರಾಧಕ್ಕೆ 6 ತಿಂಗಳು ಜೈಲು ವಾಸ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಜೈಲು ಶಿಕ್ಷೆ, ಕಲಂ 337ರ ಅಪರಾಧಕ್ಕೆ 6 ತಿಂಗಳು ಜೈಲು ಮತ್ತು 500 ರೂಪಾಯಿ ದಂಡ ಕಲಂ 338 ಅಪರಾಧಕ್ಕೆ 1 ವರ್ಷ ಜೈಲು ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳು ಹೆಚ್ಚುವರಿ ಜೈಲು ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್‌ ವಾದಿಸಿದ್ದರು

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top