ಕೊರೊನಾ ಜಾಗೃತಿಗಾಗಿ ಫೀಲ್ಡ್ ಗೆ ಇಳಿದ ಪೊಲೀಸರು | ದಂಡ ಹಾಕಿ, ಮಾಸ್ಕ್ ಕೊಟ್ಟು ಜಾಗೃತಿ

ಕೊರೊನಾ ಜಾಗೃತಿಗಾಗಿ ಫೀಲ್ಡ್ ಗೆ ಇಳಿದ ಪೊಲೀಸರು | ದಂಡ ಹಾಕಿ, ಮಾಸ್ಕ್ ಕೊಟ್ಟು ಜಾಗೃತಿ

Kadaba Times News

ಕಡಬ ಟೈಮ್ಸ್, ಸುಳ್ಯ:  ಕೊರೊನಾ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ ಓಡಾಡುವ ಪ್ರಕ್ರಿಯೆ ಮುಂದುವರಿದಿದೆ. ಇದೀಗ ಪೋಲೀಸರು ಕೊರೊನಾ ಜಾಗೃತಿಗಾಗಿ ಫೀಲ್ಡ್ ಗೆ ಇಳಿದಿದ್ದಾರೆ.

ಸುಳ್ಯದ ಬಸ್ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ನಿಂತಿರುವ ಪೋಲೀಸರ ತಂಡ  ಮಾಸ್ಕ್ ಹಾಕದೇ ಓಡಾಡುವವರನ್ನು ಹಿಡಿದು ದಂಡ ಹಾಕಿ, ಅವರಿಗೆ  ಹೊಸ ಮಾಸ್ಕ್ ಕೊಟ್ಟು ಜಾಗೃತಿ ಮಾಡುತ್ತಿದ್ದಾರೆ.

ಬಸ್, ರಿಕ್ಷಾ ಗಳನ್ನು ನಿಲ್ಲಿಸಿ ಚೆಕ್ ಮಾಡಿ, ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರಜೋಗಿ, ಎಸ್.ಐ. ಹರೀಶ್ ಎಂ.ಆರ್. ಪೋಲೀಸರ ತಂಡ ಫೀಲ್ಡ್ ನಲ್ಲಿ ಜಾಗೃತಿ ಕೈಗೊಂಡಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top