ಕೊಂಬಾರು: ಹಾಸ್ಯ ಕಲಾವಿದನ ಜೊತೆ ಸೆಲ್ಪಿಗಾಗಿ ಮುಗಿಬಿದ್ದ ಅಭಿಮಾನಿಗಳು

ಕೊಂಬಾರು: ಹಾಸ್ಯ ಕಲಾವಿದನ ಜೊತೆ ಸೆಲ್ಪಿಗಾಗಿ ಮುಗಿಬಿದ್ದ ಅಭಿಮಾನಿಗಳು

Kadaba Times News

ಕಡಬ ಟೈಮ್ಸ್, ಮನೋರಂಜನೆ: ಕಡಬದ ಹೆಸರಾಂತ ಹಾಸ್ಯ ಕಲಾವಿದ ರವಿ ರಾಮಕುಂಜ ಅವರ ಜೊತೆ ಸೆಲ್ಪಿ ತೆಗೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಮಾ.20 ರಂದು ಕಡಬ ತಾಲೂಕಿನ ಕೊಂಬಾರಿಬಲ್ಲಿ ನೇಮೋತ್ಸವ ನಡೆದ ವೇಳೆ  ರವಿ ರಾಮಕುಂಜ ಅವರನ್ನು ಸಂಘಟಕರು ಸನ್ಮಾನ ಮಾಡಿದ್ದರು. ಕಾರ್ಯಕ್ರಮ ಮುಗಿದ   ಬಳಿಕ ನೆರೆದಿದ್ದ ಜನರು ಸ್ಟೇಜ್ ನಲ್ಲಿಯೇ  ಹಾಸ್ಯ ಕಲಾವಿದನ  ಜೊತೆ ಫೋಟೊ ತೆಗೆಯಲು ಸರದಿ ಸಾಲಿನಲ್ಲಿ ನಿಂತರು. ಇತ್ತೀಚೆಗೆ “ಕುಂಜನ ಕುಸಲ್” ವೀಡಿಯೋ ಹಾಡಿನ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಇದನ್ನು ಉಲ್ಲೇಖಿಸಿಕೊಂಡೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರತಿಭೆಯಾಗಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ರವಿ ರಾಮಕುಂಜ ರವರು ಮಾತಿನ ಮೋಡಿ ಹಾಗೂ  ನಟನೆಯ ಮೂಲಕವೇ ನೋಡುಗರಲ್ಲಿ ನಗು ಭರಿಸುವ  ಹಾಸ್ಯವನ್ನು ಸೃಷ್ಟಿಸುವ ಹಾಸ್ಯ ಕಲಾವಿದ ಮತ್ತು ಬೇಡಿಕೆಯ ಕಲಾವಿದ. ವಿವಿಧ ನಾಟಕಗಳಲ್ಲಿ ಬಣ್ಣ ಹಚ್ಚಿದಲ್ಲದೆ,  ನಮ್ಮ ಟಿವಿ ಕುಡ್ಲ ಚಾನೆಲ್‌ನ ಕಾಮಿಡಿ ಶೋಗಳಾದ  ‘ಬಲೆ ತೆಲಿಪಾಲೆ’ ವಿ4 ಚಾನೆಲ್‌ನ ‘ಕಾಮಿಡಿ ಪ್ರೀಮಿಯರ್‌ ಲೀಗ್‌’ನಲ್ಲಿ ಕುಸಾಲ್‌ ತಂಡದ ಸದಸ್ಯರಾಗಿ ಅಭಿನಯಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top