




ಕಡಬ ಟೈಮ್ಸ್ (KADABA TIMES):ಕಡಬದ ಮುಖ್ಯ ರಸ್ತೆಯಲ್ಲಿರುವ ಪಂಚಾಯತ್ ಬಿಲ್ಡಿಂಗ್ ನಲ್ಲಿ ಮಹಿಳೆಯರ ವಸ್ತ್ರ ಮಾರಾಟ ಮಳಿಗೆ ಎಕ್ಸ್ .ಎಲ್.ಲೇಡಿಸ್ ಬೊಟಿಕ್ಯು ನ.12ರಂದು ಶುಭಾರಂಭಗೊಂಡಿತು.
ಕಡಬ ಪೋಲಿಸ್ ಠಾಣೆಯ ಉಪನಿರೀಕ್ಷಕ ರುಕ್ಮ ನಾಯ್ಕ್ ಮಳಿಗೆಯನ್ನು ಉದ್ಘಾಟಿಸಿ ,ಬೆಳೆಯುತ್ತಿರುವ ಪಟ್ಟಣದಲ್ಲಿ ಹಲವು ವ್ಯಾಪಾರ ವಹಿವಾಟುಗಳಿಗೆ ಕೇಂದ್ರ ಸ್ಥಳವಾಗಿದೆ.ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಾ ಸಂಸ್ಥೆ ಬೆಳಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಿ.ಪಿ.ವಗೀಸ್,ಜೆಡಿಎಸ್ ಮುಖಂಡ ಹಾಜಿ ಸೈಯದ್ ಮೀರಾ ಸಾಹೇಬ್, ಹಾಜಿ ಹನೀಪ್ ಕೆ.ಎಂ. ರಾಯ್ ಅಬ್ರಹಾಂ, ನಾರಾಯಣ ರೈ, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್. ಸವಾದ್ ಪುರುಷರಕಟ್ಟೆ ಉಪಸ್ಥಿತರಿದ್ದರು.
ಮಳಿಗೆ ಮಾಲಕ ರಫೀಕ್, ಪಾಲುದಾರರಾದ ಸಂಶುದ್ದೀನ್, ಶರೀಫ್ ಕೆ.ಎಂ.ರವರು ಅತಿಥಿಗಳನ್ನು ಬರಮಾಡಿಕೊಂಡರು.