




ಕಡಬ ಟೈಮ್ಸ್ (KADABA TIMES):ಆತ್ಮನಿರ್ಭರ ಭಾರತ್ ಯೋಜನೆಯಡಿ ಕೇಂದ್ರ ಸರಕಾರ ಘೋಷಿಸಿದ್ದ ತುರ್ತು ಸಾಲ ಖಾತ್ರಿ ಯೋಜನೆ(ಇಸಿಎಲ್‌ಜಿಎಸ್)ಯನ್ನು ಇನ್ನೂ ಒಂದು ತಿಂಗಳ ಅವಧಿಗೆ ವಿಸ್ತರಣೆ ಮಾಡ ಲಾಗಿದೆ.
ನವೆಂಬರ್ 30ರವರೆಗೆ ಅಥವಾ ಯೋಜನೆಯಡಿ ಮಂಜೂ ರಾದ 3 ಲಕ್ಷ ಕೋಟಿ ರೂ.ಗಳನ್ನು ವಿತರಣೆ ಮಾಡಿ ಮುಗಿಯು ವವರೆಗೆ ಇದನ್ನು ವಿಸ್ತರಿಸಲಾಗಿದೆ ಎಂದು ಸರಕಾರ ಹೇಳಿದೆ.ಕೊರೊನಾ ಲಾಕ್‌ಡೌನ್‌ನಿಂದ ಹಳಿತಪ್ಪಿದ್ದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಹಾಗೂ ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರಕಾರವು ತುರ್ತು ಸಾಲ ಯೋಜನೆಯನ್ನು ಘೋಷಿಸಿತ್ತು.

ಅದರಂತೆ, ಎಂಎಸ್‌ಎಂಇ, ಉದ್ದಿಮೆಗಳಿಗೆ ಸಾಲ, ಬ್ಯುಸಿನೆಸ್ ಉದ್ದೇಶಕ್ಕೆ ನೀಡಲಾಗುವ ವೈಯಕ್ತಿಕ ಸಾಲ ಹಾಗೂ ಮುದ್ರಾ ಗ್ರಾಹಕರಿಗೆ ಮೇಲಾಧಾರ ಮುಕ್ತ ಸಾಲ ನೀಡಲು ನಿರ್ಧರಿಸಿತ್ತು.