




ಕಡಬ ಟೈಮ್ಸ್ (KADABA TIMES):ಕುಕ್ಕೆ ಶ್ರೀ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿರುವುದಾಗಿ ಮಲೆಕುಡಿಯರ ಸಂಘ ವಲಯ ಸಮಿತಿ ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿದೆ.
.ಕುಕ್ಕೆ ದೇಗುಲಕ್ಕೆ ನೂತನವಾಗಿ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು ಸ್ಥಳೀಯ ಮೂಲ ನಿವಾಸಿಗಳಾದ ಮಲೆ ಕುಡಿಯ ಬುಡಕಟ್ಟು ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ. ಈ ಹಿಂದಿನ ನಿರ್ದಾರದಂತೆ ಮಲೆಕುಡಿಯ ಜನಾಂಗದವರ ಕೋರಿಕೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಹಿಂದಿನ ವ್ಯವಸ್ಥಾಪನಾ ಸಮಿತಿಗಳಲ್ಲಿ ಮಲೆಕುಡಿಯರಿಗೆ ಅವಕಾಶ ಕಲ್ಪಿಸಲಾಗಿದೆ.

ಈಗ ಆದೇಶ ವಾಗಿರುವ ಅಭಿವೃದ್ಧಿ ಸಮಿತಿಯನ್ನು ರದ್ದುಗೊಳಿಸಿ ಮಲೆಕುಡಿಯ ಜನಾಂಗದವರಿಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಮಲೆಕುಡಿಯ ಜನಾಂಗದವರ ಸಂಘಟನೆಯು ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದು ರಾಜ್ಯ, ಜಿಲ್ಲಾ, ತಾಲೂಕು ಮಲೆಕುಡಿಯರ ಸಮಿತಿ ಯ ಪರವಾಗಿ ಮಲೆಕುಡಿಯರ ಸಂಘ ವಲಯ ಸಮಿತಿ ಸುಬ್ರಹ್ಮಣ್ಯ ತಿಳಿಸಿದೆ.