




- ಗ್ರಾಮೀಣ ಭಾಗದ ಕನ್ನಡ ಪರ ಸಂಘಟನೆಗಳಿಗೂ ಗೌರವ ಸಿಗಬೇಕು- ತಾ.ಪಂ ಅಧ್ಯಕ್ಷೆ ಕುಮಾರಿ ರಾಜೇಶ್ವರಿ
- ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು- ಉಪನ್ಯಾಸಕ ವಿಶ್ವನಾಥ ರೈ
- ಕನ್ನಡ ಕರುಳಿನ ಭಾಷೆಯಾಗಬೇಕು- ಜನಾರ್ಧನ ಗೌಡ
ಕಡಬ ಟೈಮ್ಸ್ (KADABA TIMES):ಕನ್ನಡದ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಾಗರಿಕರಾದ ನಮ್ಮೆಲ್ಲರ ಕರ್ತ್ಯವ್ಯವಾಗಿದೆ. ಈ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕನ್ನಡ ಹೋರಾಟಗಾರರಿಗೆ ,ಸಂಘ ಸಂಸ್ಥೆಗಳಿಗೂ ಗೌರವ ಸಿಗುವಂತಾಗಬೇಕೆಂದು ಕಡಬ ತಾ.ಪಂ ಅಧ್ಯಕ್ಷೆ ಕುಮಾರಿ ರಾಜೇಶ್ವರಿ ಕನ್ಯಾಮಂಗಲ ಹೇಳಿದರು.
ಅವರು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಾಲೂಕು ಆಡಳಿತದ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ರಾಜ್ಯ ಮಟ್ಟದಲ್ಲಿ ಕನ್ನಡ ಹೋರಾಟಗಾರರನ್ನು ಗುರುತಿಸಿದಂತೆ ತಾಲೂಕು ಅಥವಾ ಗ್ರಾಮೀಣ ಮಟ್ಟದ ಹೋರಾಟಗಾರರಿಗೂ ಗೌರವರ ಸಿಗಬೇಕೆಂದರು.
ಪ್ರಧಾನ ಭಾಷಣ ಮಾಡಿದ ಕೊಕ್ಕಡ ಸ.ಪ.ಪೂ ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಮಾತನಾಡಿ ಬೇರೆ ಭಾಷೆಗಳ ದೂಷಣೆ ಸಲ್ಲದು,ಕನ್ನಡ ಭಾಷೆಯ ಪೋಷಣೆಯಾಗಬೇಕು ಎಂದರಲ್ಲದೆ ಕಡಬ ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ಆಗಬೇಕೆಂಬ ಇಂಗಿತ ವ್ಯಕ್ತಪಡಿಸಿದರು. ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಕನ್ನಡದ ಉಳಿವಿಗೆ ಸರ್ಕಾರಿ ಶಾಲೆಗಳ ಕೊಡುಗೆಯೂ ಇದೆ. ಸರ್ಕಾರಿ ಶಾಲೆ ಉಳಿಯಬೇಕೆಂದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ಧನ ಗೌಡ ಮಾತನಾಡಿ ಕನ್ನಡ ಭಾಷೆ ಕರುಳಿನ ಭಾಷೆಯಾಗಬೇಕು ಎಂದು ಹೇಳಿ ಕನ್ನಡ ರಾಜ್ಯೋತ್ಸವದ ಕುರಿತ ಹಾಡಿನ ಮೂಲಕ ಕನ್ನಡ ಪ್ರೇಮವನ್ನು ವರ್ಣಿಸಿದರು.
ವೇದಿಕೆಯಲ್ಲಿ ಕಡಬ ತಹಶೀಲ್ದಾರ್ ಬಿ ಅನಂತ ಶಂಕರ, ಎ.ಪಿ.ಎಂ.ಸಿ. ಸದಸ್ಯೆ ಪುಲಸ್ತ್ಯ ರೈ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ನಿವೃತ್ತ ಶಿಕ್ಷಕ ವಿ.ಯಂ. ಕುರಿಯನ್, ತಾ.ಪಂ. ಸದಸ್ಯೆ ಸುಭದಾ ಎಸ್,ರೈ, ಕಡಬ ಅಟೊ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಉಪಸ್ಥಿತರಿದ್ದರು. ಉಪ ತಹಸೀಲ್ದಾರ್ ಕೆ.ಟಿ.ಮನೋಹರ್ ಸ್ವಾಗತಿಸಿ, ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ವಂದಿಸಿದರು. ಶಿಕ್ಷಕ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಲೆಕ್ಕಿಗೆ ಲಲಿತಾ ನಾಯಕ್ ಪ್ರಾರ್ಥನೆ ಹಾಡಿದರು. ರಶ್ಮಿ, ದೀಕ್ಷಾ, ದೀಪ್ತಿ ನಾಡಗೀತೆ ಹಾಡಿದರು. ಧ್ವಜಾರೋಹಣದ ವೇಳೆ ಕಡಬ ಆರಕ್ಷಕ ಉಪ ನಿರೀಕ್ಷಕ ರುಕ್ಮ ನಾಯ್ಕ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಸಾಹಿತಿ ಎಸ್.ಎನ್.ಉಡುಪ, ಯುವ ಸಾಹಿತಿ ಸಮ್ಯಕ್ತ್ ಜೈನ್, ಎಸ್.ಎಸ್.ಎಲ್.ಸಿ ಟಾಪರ್ ಅನುಷ್ ಎ.ಎಲ್. ಅತಿ ಹೆಚ್ಚು ಅಂಕ ಗಳಿಸಿದ ಶ್ರೀರಕ್ಷಾ, ಕ್ರೀಡಾ ಕ್ಷೇತ್ರದ ಸಾಧಕಿ ಊವರ್ಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಎಸ್.ಎನ್, ಉಡುಪ ಮಾತನಾಡಿದರು. ನಿವೃತ್ತ ಶಿಕ್ಷಕಿ ಗ್ರೇಸಿ ಪಿಂಟೋ, ಜಾನ್ ವೇಗಸ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಕಂದಾಯ ನಿರೀಕ್ಷಕ ಅವಿನ್ ರಂಗತ್ಮಲೆ, ಗ್ರಾಮಕರಣಿಕ ಹರೀಶ್, ಸತೀಶ್, ನಿವೃತ್ತ ಶಿಕ್ಷಕ ಥೋಮಸ್, ತಹಸೀಲ್ದಾರ್ ಕಛೇರಿಯ ಭಾರತಿ,ಕಡಬ ಪಟ್ಟಣ ಪಂಚಾಯತ್ ವಾರಿಜಾ, ಹರೀಶ್ ಬೆದ್ರಾಜೆ ಮೊದಲಾದವರು ಅತಿಥಿಗಳಿಗೆ ಕನ್ನಡ ಶಾಲು ಹೊದಿಸಿ ಗೌರವಿಸಿದರು .