




ರೂ. 2 ಲಕ್ಷದ ಅಂದಾಜುಪಟ್ಟಿ ಕಳುಹಿಸಿಕೊಟ್ಟದ್ದು ಏನಾಯಿತು?
ಕಡಬ ಟೈಮ್ಸ್ (KADABA TIMES):ಮೀನು ಮಾರಾಟದ ಹರಾಜು ಹಕ್ಕಿನಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಪಟ್ಟಣ ಪಂಚಾಯತ್ ವ್ಯವಸ್ಥಿತಿತ ಮೀನು ಮಾರುಕಟ್ಟೆಯನ್ನು ನಿರ್ವಹಿಸದಿರಲು ಮುಂದಾಗಿಲ್ಲ. ಲಕ್ಷ ರೂ. ಪಾವತಿಸಿದರೂ ಟೆಂಡರ್ ಪಡೆದವರು ರಸ್ತೆಯ ಬದಿಯಲ್ಲೇ ಮೀನು ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸಂತಕಟ್ಟೆಯ ಒಳಗೆ ಇರುವ ಮೀನು ಮಾರುಕಟ್ಟೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಮಾರುಕಟ್ಟೆಯಿಂದ ತ್ಯಾಜ್ಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲ. ತ್ಯಾಜ್ಯ ನೀರು ಸಂಗ್ರಹವಾಗಲು ನಿರ್ಮಿಸಲಾಗಿದ್ದ ಸಣ್ಣ ಗುಂಡಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ದುರ್ವಾಸನೆ ಬೀರಲು ಆರಂಭವಾದ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮೀನು ಮಾರಾಟಗಾರರು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿಲ್ಲ.

ಮೀನು ಮಾರಾಟಗಾರರು,ಸಾರ್ವಜನಿಕರು ಪಂಚಾಯತ್‌ಗೆ ಅಸ್ತಿತ್ವದಲ್ಲಿರುವಾಗ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ನೀಡಿಲ್ಲ ಎಂಬುದು ಸದ್ಯ ಇರುವ ಆರೋಪ. ಸಂತೆಕಟ್ಟೆಯ ಬಳಿ ಈಗ ಇರುವ ಮೀನು ಮಾರುಕಟ್ಟೆ ಹಾಗೂ ಹಳೆಯ ವಾಣಿಜ್ಯ ಕಟ್ಟಡಗಳನ್ನು ಕೆಡವಿ ಹೊಸದಾಗಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದರು.ಆದರೆ ಯಾವುದೂ ಕಾರ್ಯಾಗತವಾಗುತ್ತಿರುವುದು ಗೋಚರಿಸುತ್ತಿಲ್ಲ. ಈ ಹಿಂದೆ ಗ್ರಾ.ಪಂ ಅಸ್ತಿತ್ವ ಇರುವಾಗ ಗ್ರಾ.ಪಂ ಅಧ್ಯಕ್ಷರು ಮೀನು ಮಾರುಕಟ್ಟೆಯ ವ್ಯವಸ್ಥೆಗಳನ್ನು ಸರಿಪಡಿಸಲು ರೂ. 2 ಲಕ್ಷದ ಅಂದಾಜುಪಟ್ಟಿ ತಯಾರಿಸಿ ಸಂಬಂಧಪಟ್ಟವರಿಗೆ ಕಳುಹಿಸಿಕೊಡಲಾಗಿದೆ ಎಂದಿದ್ದರು.
ಈ ಸಮಸ್ಯೆ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪಟ್ಟಣ ಪಂಚಾಯತ್ ಆಡಳಿತಾಳಿಧಿಕಾರಿ ಅರುಣ್ ಅವರು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.