ಉಪ್ಪಿನಂಗಡಿ :ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ |ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯ!

ಉಪ್ಪಿನಂಗಡಿ :ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ |ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯ!

Kadaba Times News
0

ಕಡಬ ಟೈಮ್ಸ್ (KADABA TIMES):ಉಪ್ಪಿನಂಗಡಿ:ಅಕ್ಟೋಬರ್ 27 ರಂದು ನಡೆದ ಪೆರ್ನೆಯ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಯಾವುದೇ ಸಂಧರ್ಭದಲ್ಲೂ ದರೋಡೆಕೋರರ ಬಂಧನದ ಸಾಧ್ಯತೆ ಇರುವ ಬಗ್ಗೆ ಮಾಹಿತಿ ಲಭಿಸಿದೆ.

ಪೆರ್ನೆಯಲ್ಲಿ ಅಡಿಕೆ ಖರೀದಿ ವ್ಯಾಪಾರ ನಡೆಸುತ್ತಿದ್ದ ಪದೆಬರಿ ನಿವಾಸಿ ದೀಪಕ್ ಜಿ. ಶೆಟ್ಟಿಯವರು  ಅಕ್ಟೋಬರ್ 27 ರ ಮಂಗಳವಾರ ರಾತ್ರಿ ಅಂಗಡಿ ಬಂದ್ ಮಾಡಿ ಅಡಿಕೆ ಮಾರಾಟ ಮಾಡಿದ 3.50 ಲಕ್ಷ ರೂಪಾಯಿ ಹಣದೊಂದಿಗೆ ತನ್ನ ಮನೆಗೆ ಬೈಕ್ ನಲ್ಲಿ  ತೆರಳುತ್ತಿದ್ದರು. ಈ ಸಂದರ್ಭ ಇವರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ದೀಪಕ್ ಶೆಟ್ಟಿಯವರ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು, ಅವರ ಕೈಯಲ್ಲಿದ್ದ ಹಣದ ಬ್ಯಾಗ್, ಚಿನ್ನದ ಸರ ಹಾಗೂ ಇವರಲ್ಲಿದ್ದ ಲಾವಾ ಕಂಪೆನಿಯ ಮೊಬೈಲ್ ಸೆಟ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ  ಕಾರ್ಯಾಚರಣೆಗೆ ಮುಂದಾದರಾದರೂ ಘಟನೆ ಸಂಭವಿಸಿ 10 ದಿನಗಳು ಕಳೆದರೂ ದರೋಡೆಕೋರರ ಬಂಧನವಾಗದಿರುವುದು ವರ್ತಕ ಸಮೂಹದಲ್ಲಿ ಕಳವಳ ಮೂಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ದರೋಡೆಕೋರರ ಸುಳಿವಿಗಾಗಿ ಶೋಧ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿ ದೊರಕಿದ್ದು ಸದ್ಯದಲ್ಲೇ ಆರೋಪಿಗಳು ಪೋಲೀಸರ ಬಲೆಗೆ ಬೀಳಲಿದ್ದಾರೆ ಎನ್ನಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top