




ಕಡಬ ಟೈಮ್ಸ್ (KADABA TIMES):ಕಡಬ ಮುಖ್ಯ ಪೇಟೆಯ ಪಿಕಪ್ ವಾಹನ ನಿಲ್ದಾಣದ ಸಮೀಪ ಚರಂಡಿ ಬ್ಲಾಕ್ ಆಗಿ ದುರ್ವಾಸನೆ ಬರುತ್ತಿದ್ದ ಸಮಸ್ಯೆಯನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಂಡು ಸರಿಪಡಿಸಿದ್ದಾರೆ.
ಚರಂಡಿಯ ಸಮರ್ಪಕ ನಿರ್ವಹಣೆ ಇಲ್ಲದೆ ತ್ಯಾಜ್ಯ ನೀರು ಮೇಲೆ ಬಂದು ದುರ್ವಾಸನೆ ಬೀರುತ್ತಿರುವ ಬಗ್ಗೆ ಅ.30 ರಂದು ಕಡಬ ಟೈಮ್ಸ್ ವೆಬ್ ತಾಣವು “ಕಡಬ ಪೇಟೆಯಲ್ಲಿ ಚರಂಡಿ ದುರ್ವಾಸನೆ|ಪ.ಪಂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ?” ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.

ಇದೀಗ ಗೂಡಂಗಡಿ ವ್ಯಾಪರಿಗಳು, ವಾಹನ ಚಾಲಕರು, ಸಾರ್ವಜನಿಕರು ನೆಮ್ಮದಿಯಿಂದ ಓಡಾಡುವಂತಾಗಿದೆ. ಪಟ್ಟಣ ಪಂಚಾಯತ್ ಅಧಿಕಾರಿಗಳ ಶೀಘ್ರ ಸ್ಪಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.