




ಕಡಬ ಟೈಮ್ಸ್ (KADABA TIMES):ಈಗಾಗಲೇ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿ ಪಂಚಾಯತ್ ಎಲ್ಲ ವಾರ್ಡ್ ಗಳಿಗೆ ಮೀಸಲಾತಿ ಸ್ಥಾನಗಳನ್ನು ಪ್ರಕಟಿಸಲಾಗಿದ್ದು ಇದರಲ್ಲಿ ಕೊಣಾಜೆ ಗ್ರಾಮದ ಪುತ್ತಿಗೆ ವಾರ್ಡ್ ಗೆ ಎಸ್,ಟಿ, ಮಹಿಳೆ-1 ಸ್ಥಾನ ಹಾಗೂ ಸಾಮಾನ್ಯ ಮಹಿಳೆ-1 ಸ್ಥಾನ ನೀಡಲಾಗಿದ್ದು, ಈ ವಾರ್ಡ್ ನಲ್ಲಿ ಎಸ್.ಟಿ.ಸ್ಥಾನಕ್ಕೆ ಅಭ್ಯರ್ಥಿಗಳೇ ಇಲ್ಲ, ಆದುದರಿಂದ ಪುತ್ತಿಗೆ ವಾರ್ಡ್ ಗೆ ಸಾಮಾನ್ಯ ಸ್ಥಾನ ನೀಡುವಂತೆ ಗ್ರಾ.ಪಂ.ಮಾಜಿ ಸದಸ್ಯ ಲೋಕಯ್ಯ ಗೌಡ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿ ಮನವಿ ಮಾಡಿದ್ದಾರೆ.
ಪುತ್ತಿಗೆ ವಾರ್ಡ್ ಗೆ ಎಸ್.ಟಿ. ಮಹಿಳೆ-1 ಸ್ಥಾನ, ಹಾಗೂ ಸಾಮಾನ್ಯ ಮಹಿಳೆ-1 ಸ್ಥಾನ, ಕೊಣಾಜೆ ವಾರ್ಡ್ ಗೆ ಸಾಮಾನ್ಯ ಸ್ಥಾನ-2 ಸ್ಥಾನ, ಹಾಗೂ ಎಸ್.ಸಿ. ಮಹಿಳೆ-1 ಸ್ಥಾನ ಒಟ್ಟು ಪಂಚಾಯತ್ ನಲ್ಲಿ 5 ಸ್ಥಾನಗಳಿವೆ.

ಈ ಬಗ್ಗೆ ಗ್ರಾ.ಪಂ. ಮಾಜಿ ಸದಸ್ಯ ಲೋಕಯ್ಯ ಗೌಡ ಕೊಣಾಜೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ಪುತ್ತಿಗೆ ವಾರ್ಡ್ ನಲ್ಲಿ ಎಸ್.ಟಿ. ವರ್ಗಕ್ಕೆ ಸೇರಿದ ಒಂದು ಮನೆಗಳು ಕೂಡ ಇಲ್ಲ, ಕೊಣಾಜೆ ವಾರ್ಡ್ ನಲ್ಲಿ ಆ ವರ್ಗಕ್ಕೆ ಸೇರಿದವರು ಇದ್ದಾರೆ ಆದುದರಿಂದ ಕೊಣಾಜೆ ವಾರ್ಡ್ ಗೆ ನೀಡಲಾದ 2 ಸಾಮಾನ್ಯ ಸ್ಥಾನಗಳಲ್ಲಿ ಒಂದನ್ನು ಪುತ್ತಿಗೆ ವಾರ್ಡ್ ಗೆ ಕಲ್ಪಿಸಿದರೆ ಅನುಕೂಲವಾಗುತ್ತದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಲೋಕಯ್ಯ ಅವರು ಡಿಸಿಯವರಲ್ಲಿ ಮನವಿ ಮಾಡಿದ್ದಾರೆ