




ಕಡಬ ಟೈಮ್ಸ್ (KADABA TIMES):ಕಡಬ ಟೈಮ್ಸ್ (KADABA TIMES):ಮರ ಕಡಿದು ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ನೆಟ್ಟಣ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಬಿಳಿನೆಲೆ ಗ್ರಾಮದ ನೆಟ್ಟಣ ವಾಲ್ತಾಜೆ ಶ್ರೀನಿವಾಸ ಎಂಬವರು ಅಕ್ರಮವಾಗಿ ಮರ ಕಡಿದು ಅವರ ಮಗನ ಮನೆಯಲ್ಲಿ ದಾಸ್ತಾನು ಇರಿಸಿದರೆನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮರದ ಸೈಜುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾರ್ಗದರ್ಶದಂತೆ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಿಮನಿ,ಅರಣ್ಯ ರಕ್ಷಕರಾದ ಅಶೋಕ್, ಮಾಂತೇಶ್,ಬಸವರಾಜು,ದೀಕ್ಷಾ ಅವರುಗಳು ಪಾಲ್ಗೋಂಡಿದ್ದಾರೆ.