




ಕಡಬ ಟೈಮ್ಸ್ (KADABA TIMES):ಕಡಬ ಕೊರೋನಾ ಪರೀಕ್ಷೆಗೆ ವಾಹನ ಚಾಲಕರು ಕಾಯುತ್ತಿದದ್ದರೂ ಆರೋಗ್ಯ ಇಲಾಖೆಯವರು ತಡವಾಗಿ ಆಗಮನ. ಚಾಲಕರ ಆಕ್ರೋಶ
ಕಡಬದ ಅಂಬೇಡ್ಕರ್ ಭವನದಲ್ಲಿ ಕೊರೋನಾ ಪರೀಕ್ಷೆಗೆ ಮಾಡಿಸಲು ನಿಗದಿತ ಸಮಯಕ್ಕೆ ಬಂದ ವಾಹನ ಚಾಲಕರು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಬರುವಿಗಾಗಿ ಕಾದು ಕುಳಿತ ಪ್ರಸಂಗ ಶುಕ್ರವಾರ ನಡೆಯಿತು.

ಪ.ಪಂ ವ್ಯಾಪ್ತಿಯಲ್ಲಿ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ಉಲ್ಲೇಖಿಸಿ ಒಂಭತ್ತು ಗಂಟೆಗೆ ನಿಗದಿ ಪಡಿಸಿದ ಸ್ಥಳಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು.
ಆದರೆ ಆರೋಗ್ಯ ಇಲಾಖೆಯವರು ಹತ್ತು ಗಂಟೆಗೆ ಆಗಮಿಸಿ ಬಳಿಕ ಕೊರೋನಾ ತಪಾಸಣೆಗೆ ಸಿದ್ದತೆ ನಡೆಸಿದ್ದಾರೆ. ಸರಿಯಾದ ಸಮಯಕ್ಕೆ ತಪಾಸನೆ ಮಾಡದಿದ್ದರೆ ಎಲ್ಲರ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ,ತಡವಾಗಿ ಆರಂಭಿಸಿರುವುದಕ್ಕೆ ವಾಹನ ಚಾಲಕರಿಂದ ಆಕ್ರೋಶ ಕೇಳಿ ಬಂತು.