




ಕಡಬ ಟೈಮ್ಸ್ (KADABA TIMES):ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿರುವ ಟಿಸಿ ಪಾಯಿಂಟ್ ಬಳಿ ಯುವತಿಯೊಬ್ಬಳ ಮೊಬೈಲ್ ಸೆಟ್ ಎಗರಿಸಿ ಹೋಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪುತ್ತೂರು ನಿವಾಸಿ ಯುವತಿಯೋರ್ವಳು ಅ.22 ರಂದು ತನ್ನ ಸಂಬಂಧಿಕರ ಮನೆಗೆ ಬಂದು ವಾಪಸ್ ಹೋಗುವ ಸಮಯದಲ್ಲಿ ಉಪ್ಪಿನಂಗಡಿಯತ್ತ ಹೋಗುವ ಸರ್ಕಾರಿ ಬಸ್ ಏರಿದ್ದಾಳೆ. ಇದೇ ವೇಳೆ ಖದೀಮನೊಬ್ಬ ಬಸ್ ಏರಿದ್ದು ಯುವತಿಯ ಬ್ಯಾಗ್ನಿಂದ ಬೆಲೆ ಬಾಳುವ ಮೊಬೈಲ್ ಸೆಟ್ ಎಗರಿಸಿ ಬಸ್ ನಿಂದ ಇಳಿದು ಹೋಗಿದ್ದಾನೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರೂ ಈತನ ಪತ್ತೆಯಾಗಿಲ್ಲ. ಕಡಬ ಪೇಟೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಿದರೂ ಈ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯಾಚರಿಸದೆ ಅಕ್ರಮಗಳನ್ನು ಪತ್ತೆ ಹಚ್ಚಲು ಯೋಗ್ಯವಲ್ಲದ ರೀತಿಯಲ್ಲಿ ಇರುವುದು ವಿಪರ್ಯಾಸವಾಗಿದೆ.
ಅ. 22 ರ ಗುರುವಾರ ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದ್ದು ಸದ್ಯ ಪಕ್ಕದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಆದರೆ ಗುರುತು ಮಾತ್ರ ಇನ್ನೂ ಅಸ್ಪಷ್ಟ!