




ಕಡಬ ಟೈಮ್ಸ್ (KADABA TIMES):ಬಹು ದಿನಗಳ ಬೇಡಿಕೆಯಾದ ಕೊಯಿಲ ಪಾರ್ಮ್‍ನ ಮುಖ್ಯ ರಸ್ತೆ ಡಾಮರೀಕರಣಕ್ಕೆ ರಾಜ್ಯ ಸರಕಾರದ ವಿಶೇಷ ಅನುದಾನ 50 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿ ಶೀಘ್ರದಲ್ಲಿ ನೆರವೇರಲಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಅವರು ಗುರುವಾರ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಈ ರಸ್ತೆ ಹದಗೆಟ್ಟು ಹಲವು ವರ್ಷಗಳಾದರೂ ತಾಂತ್ರಿಕ ಅಡಚನೆಗಳಿಂದ ಅನುದಾನ ಕಾದಿರಸಲು ಸಾಧ್ಯವಾಗಲಿಲ್ಲ, ಆದರೆ ಈಗ ಸರಕಾರದಿಂದ ವಿಶೇಷ ಅನುಮತಿ ಪಡೆದು ವಿಶೇಷ ಅನುದಾನ ರಾಜ್ಯ ಸರಕಾರದಿಂದ ಐವತ್ತು ಲಕ್ಷ ರೂ ಬಿಡುಗಡೆಗೊಂಡಿದೆ, ಆ ಮೂಲಕ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದಂತಾಗಿದೆ ಎಂದರು.ಅಲ್ಲದೆ್ ಕುದುಲೂರು ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ 30 ಲಕ್ಷ ರೂ ಬಿಡುಗಡೆಯಾಗಿದ್ದು ನವೆಂಬರ್ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ, ಕೊರನಾ ಕಾರಣದಿಂದಾಗಿ ಈ ಮೊದಲು ಅನುದಾನ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ , ಸಾರ್ವಜನಿಕರು ಸಹಕರಿಸಬೇಕು ಎಂದರು

ರಸ್ತೆ ಗುದ್ದಲಿ ಪೂಜೆ ವೇಳೆ ಕಡಬ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಕಡಬ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬಿ ಜೆಪಿ ನೆಲ್ಯಾಡಿ ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ಸದಾಶಿವ ಶೆಟ್ಟಿ ಮಾರಂಗ ಸೇರಿದಂತೆ ಸ್ಥಳೀಯ ಜನ ನಾಯಕರು,ಗ್ರಾಮಸ್ಥರು ಉಪಸ್ಥಿತರಿದ್ದರು.