ಐತ್ತೂರು:ಕಾಲನಿ ಅಭಿವೃದ್ದಿಗೆ ಒತ್ತು ನೀಡಿದ ಮಾಜಿ ಗ್ರಾ.ಪಂ ಅಧ್ಯಕ್ಷರಿಗೆ ಪಕ್ಷ ಬೇಧ ಮರೆತು ಸನ್ಮಾನಿಸಿದ ನಿವಾಸಿಗಳು

ಐತ್ತೂರು:ಕಾಲನಿ ಅಭಿವೃದ್ದಿಗೆ ಒತ್ತು ನೀಡಿದ ಮಾಜಿ ಗ್ರಾ.ಪಂ ಅಧ್ಯಕ್ಷರಿಗೆ ಪಕ್ಷ ಬೇಧ ಮರೆತು ಸನ್ಮಾನಿಸಿದ ನಿವಾಸಿಗಳು

Kadaba Times News
0

 ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸಲು ಮತ್ತು ಅಭಿವೃದ್ಧಿ ಕೆಲಸ ಮಾಡಿದ ಮಾಜಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ.,ರವರಿಗೆ ಕಾಲೋನಿ ನಿವಾಸಿಗಳು ಪಕ್ಷ ಬೇಧ ಮರೆತು  ಭಾನುವಾರ ಸನ್ಮಾನ

ಕಡಬ ಟೈಮ್ಸ್ (KADABA TIMES):ಐತ್ತೂರು ಗ್ರಾ.ಪಂ ವ್ಯಾಪ್ತಿಯ ಬಜಕೆರೆ ಸಿಆರ್‌ಸಿ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸಲು ಮತ್ತು ಅಭಿವೃದ್ಧಿ ಕೆಲಸ ಮಾಡಿದ ಮಾಜಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ.,ರವರಿಗೆ ಕಾಲೋನಿ ನಿವಾಸಿಗಳು ಪಕ್ಷ ಬೇಧ ಮರೆತು  ಭಾನುವಾರ ಸನ್ಮಾನ ಕಾರ್ಯಕ್ರಮದ ಮೂಲಕ  ಬಜಕೆರೆ ಕಾಲೊನಿಯಲ್ಲಿ ಅಭಿನಂದಿಸಿದ್ದಾರೆ.

ಕಾಲೋನಿಯ ಹಿರಿಯರಾದ ಸೋಲಮುತ್ತು ಮತ್ತು ಶಿವಲಿಂಗ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು  ಬಜಕೆರೆ ಶ್ರೀ ರಾಮ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ರಾಮನ್‌ರವರು ಗ್ರಾಮಸ್ಥರ ಪರವಾಗಿ ಸನ್ಮಾನ ನೆರವೇರಿಸಿದರು. ಸನ್ಮಾನಿತರು  ರಸ್ತೆ ಕಾಂಕ್ರಿಟೀಕರಣ, ಅಂಗನವಾಡಿ ಕಟ್ಟಡ, ಬಸ್ಸು ತಂಗುದಾಣ, ಬೀದಿದೀಪ, ಸೋಲಾರ್ ದೀಪ ಅಳವಡಿಕೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶ್ರಮಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ್ ಕೆ.,ರವರು ಬಜಕರೆ ಕಾಲೋನಿಯ ಜನರು ಸನ್ಮಾನ ಮಾಡಿರುವುದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ, ಅಭಿವದ್ಧಿ ಕೆಲಸಗಳಿಗೆ  ಜನಪ್ರತಿನಿಧಿಗಳು ಮತ್ತು  ಅಧಿಕಾರಿ ವರ್ಗ ಸಹಕಾರ ನೀಡಿದೆ ಎಂದರು.ಕಾಲೋನಿಯ ಮುಖಂಡರಾದ ಮುನಿರತ್ನ, ಸತ್ಯನಾಥ, ಬಾಲಸುಬ್ರಹ್ಮಣ್ಯ, ಕಣ್ಣದಾಸ್, ಸೆಲ್ವರಾಜ್ ಸೇರಿದಂತೆ ಕಾಲನಿ ನಿವಾಸಿಗಳು ಹಾಜರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top