




ಕಡಬ ಟೈಮ್ಸ್ (KADABA TIMES):ದ.ಕ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನಲ್ಲಿ ಅ. ೨೦ರಂದು ನಡೆದ ಅಂತರ್‌ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕಡಬ ತಾಲೂಕಿನ ಯೇನೆಕಲ್ಲು ಸರಕಾರಿ ಪ್ರೌಢಶಾಲೆಗೆ ಪುರಸ್ಕಾರ ಲಭಿಸಿದೆ.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೇನೆಕಲ್ಲು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಾಯತ್ರಿ ತಿಲಕ್ ಸನ್ಮಾನ ಸ್ವೀಕರಿಸಿದರು.

ಸನ್ಮಾನವು ಅಭಿನಂದನಾ ಪತ್ರ ಹಾಗೂ ರೂ. ೫೦೦೦/- ನಗದು ಪುರಸ್ಕಾರವನ್ನು ಹೊಂದಿದೆ.