




ಕಡಬ ಟೈಮ್ಸ್ (KADABA TIMES): ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಡಬ ತಾಲೂಕು ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಡಬ ಟೈಮ್ಸ್ ವೆಬ್ ಸೈಟ್ ನ ಸಂಪಾದಕ ವಿ.ಕೆ. ಕಡಬ, ಪ್ರಧಾನ ಕಾರ್ಯದರ್ಶಿ ಯಾಗಿ ಕಹಳೆ ನ್ಯೂಸ್ ಸುಬ್ರಹಣ್ಯ ವರದಿಗಾರ ಶಿವ ಭಟ್, ಕೋಶಾಧಿಕಾರಿಯಾಗಿ ಪ್ರೈಮ್ ನ್ಯೂಸ್ ಕಡಬ ವರದಿಗಾರ ಗಣೇಶ್ ಇಡಾಳ ಇವರು ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಜನಾರ್ಧನ ಪುರಿಯ ಅವರನ್ನು ನೇಮಿಸಲಾಯಿತು
ಈ ಸಭೆಯು ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಅ.26ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜತೆ ಕಾರ್ಯದರ್ಶಿ ಯಾಗಿ ಪರಿವರ್ತನಾ ಸುದ್ದಿಯ ದಿವಾಕರ ಮುಂಡಾಲ, ಉಪಾಧ್ಯಕ್ಷರಾಗಿ ಕರಾವಳಿ ಸಂಕುಲ ವಾರ ಪತ್ರಿಕೆಯ ವರದಿಗಾರ ಸಿದ್ದಿಕ್ ಕೊರಂದೂರು, ಸಂಘಟನಾ ಕಾರ್ಯದರ್ಶಿ ಉದಯ ಆಚಾರ್ ಆಚಾರ್ ಪುತ್ತಿಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೊಸಗನ್ನಡ ವೆಬ್‌ಸೈಟ್ ವರದಿಗಾರ ದೀಪಕ್ ಹೊಸಮಠ, ಕಡಬ ಟೈಮ್ಸ್ ಕಡಬ ವರದಿಗಾರ ಸಂತೋಷ್ ಪಟ್ನ, ಸುದ್ದಿ ಬಿಡುಗಡೆ ಕಡಬ ಕಛೇರಿ ಸಿಬ್ಬಂದಿ ದಿವ್ಯ ಪೆರ್ಲ ಅವರನ್ನು ಆಯ್ಕೆ ಮಾಡಲಾಯಿತು. ಕಾನೂನು ಸಲಹೆಗಾರರಾಗಿ ನ್ಯಾಯವಾದಿ ನಾಗೇಶ್ ಶರ್ಮ ಅವರನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್, ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್, ಕೋಶಾಧಿಕಾರಿ ಜ್ಯೋತಿ ಪ್ರಕಾಶ್ ಪುಣಚ, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ., ಉಪಾಧ್ಯಕ್ಷ ರಾಮ್ ದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.