




ಕಡಬ ಟೈಮ್ಸ್ (KADABA TIMES): ದಕ್ಷಿಣ ಕನ್ನಡದ ವೆಲೇರಿಯನ್ ಡಿಸೋಜ, ಉಡುಪಿಯ ವಿಜಯ ಕುಮಾರ್, ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಗಣ್ಯರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ರಾಜ್ಯ ಸರ್ಕಾರ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.
2020 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಾಹಿತ್ಯ
- ಶ್ರೀ.ಪ್ರೊ.।।ಸಿ.ಪಿ. ಸಿದ್ಧಾಶ್ರಮ, ಧಾರವಾಡ
- ಶ್ರೀ. ವಿ. ಮುನಿ ವೆಂಕಟಪ್ಪ, ಕೋಲಾರ
- ಶ್ರೀ. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
- ಶ್ರೀ. ವೆಲೇರಿಯನ್ ಡಿಸೋಜ ( ವಲ್ಲಿವಗ್ಗ ) ದಕ್ಷಿಣ ಕನ್ನಡ
- ಶ್ರೀ ಡಿ.ಎನ್. ಅಕ್ಕಿ ಯಾದಗಿರಿ.
ಸಂಗೀತ

- ಶ್ರೀ ಹಂಬಯ್ಯ ನೂಲಿ, ರಾಯಚೂರು
- ಶ್ರೀ ಅನಂತ ತೆರೆದಾಳ, ಬೆಳಗಾವಿ
- ಶ್ರೀ ಬಿ. ವಿ. ಶ್ರೀನಿವಾಸ್, ಬೆಂಗಳೂರು ನಗರ
- ಶ್ರೀ ಗಿರಿಜಾ ನಾರಾಯಣ, ಬೆಂಗಳೂರು ನಗರ
- ಶ್ರೀ ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ
ನ್ಯಾಯಾಂಗ
- ಶ್ರೀ ಕೆ. ಎನ್. ಭಟ್ , ಬೆಂಗಳೂರು
- ಶ್ರೀ . ಎಂ. ಕೆ. ವಿಜಯಕುಮಾರ, ಉಡುಪಿ
ಮಾಧ್ಯಮ
- ಶ್ರೀ. ಸಿ. ಮಹೇಶ್ವರನ್, ಮೈಸೂರು
- ಶ್ರೀ. ಟಿ. ಮಹೇಶ್ (ಈ ಸಂಜೆ ) ಬೆಂಗಳೂರು ನಗರ
ಯೋಗ
- ಡಾ।। ಎ. ಎಸ್. ಚಂದ್ರಶೇಖರ, ಮೈಸೂರು