




ಕಡಬ ಟೈಮ್ಸ್ (KADABA TIMES): ಹಲವು ವರ್ಷಗಳಿಂದ ಆಲಂಕಾರು ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಚಿದಾನಂದ ಅವರಿಗೆ ಜುಲೈ 31 ರಂದು ಕುಂಟ್ಯಾನ ತರವಾಡು ಮನೆಯ ಆವರಣದಲ್ಲಿ ಗೌರವಿಸಲಾಯಿತು.
ಕಳೆದ 10 ವರ್ಷದಲ್ಲಿ ಸಹಾಯಕ ಪವರ್ ಮ್ಯಾನ್ ಆಗಿ ಪ್ರಾಮಾಣಿಕ
ಸೇವೆಯನ್ನು ಸಲ್ಲಿಸುತ್ತಾ ಮಳೆ, ಗಾಳಿ, ಸಿಡಿಲು, ಬಿಸಿಲು ಯಾವುದನ್ನೂ ಲೆಕ್ಕಿಸದೆ ಊರಿಗೆ ಬೆಳಕನ್ನು
ನೀಡುವಲ್ಲಿ ನಿರಂತರವಾಗಿ ದುಡಿದ ಇವರ ಸೇವಾ ದಕ್ಷತೆ
ಮತ್ತು ನಿಷ್ಠೆಯನ್ನು ನೆನಪಿಸಿಕೊಳ್ಳಲಾಯಿತು.
ಈ ಸರಳ
ಕಾರ್ಯಕ್ರಮದಲ್ಲಿ ತರವಾಡು ಮನೆಯ ಯಜಮಾನ ತಿಮ್ಮಪ್ಪ
ಗೌಡ ಕುಂಟ್ಯಾನ, ಹಿರಿಯರಾದ ಬೆಳಿಯಪ್ಪ ಗೌಡ, ದಿವಾಕರ
ಕುಂಟ್ಯಾನ, ಯುವರಾಜ ಕುಂಟ್ಯಾನ , ಕುಟುಂಬಸ್ಥರು ಉಪಸ್ಥಿತರಿದ್ದರು.