




ಕಡಬ ಟೈಮ್ಸ್ , ಕಡಬ: ಯಾತ್ರಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅಗತ್ಯ ಸೇವೆಯನ್ನು ನೀಡುತ್ತಾ ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ ಸುಬ್ರಹ್ಮಣ್ಯ ರೋಡ್ ಟ್ಯಾಕ್ಸಿ ಚಾಲಕ ಮಾಲಕರ ಸಂಘದವರು ಅಂಬುಲೆನ್ಸ್ ಕೊಡುಗೆ ನೀಡಿ ಅನೇಕ ಜನ ಜೀವ ಉಳಿಸುವ ಕಾರ್ಯ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಬಿಳಿನೆಲೆ ಗ್ರಾಮದಲ್ಲಿ ಅಂಬ್ಯುಲೆನ್ಸ್ ಕೊರತೆಯೊಂದನ್ನು ನೀಗಿಸಿದಂತಾಗಿದೆ. Emergeny contact number: 9611647483, 6364403717, 8197208586 ,7338512973
ಸುಬ್ರಹ್ಮಣ್ಯ
ರೋಡ್ ನೆಟ್ಟಣ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಎಚ್ ಅಧ್ಯಕ್ಷತೆಯಲ್ಲಿ ಜುಲೈ.
15 ರಂದು ಸಂಘದ ಮಹಾಸಭೆ ಮತ್ತು ಅಂಬುಲೆನ್ಸ್ ಲೋಕಾರ್ಪಣೆ
ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದಿದೆ.
ಅಂಬ್ಯುಲೆನ್ಸ್
ಲೋಕಾರ್ಪಣೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು
ಇನ್ನೊಬ್ಬರ ಪ್ರಾಣ ಉಳಿಸುವ ವ್ಯಕ್ತಿಗಳು ಚಾಲಕರು
ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ದಿನೇಶ್
ಅವರು ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಪಂಚ ಗ್ಯಾರಂಟಿಗಳ
ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಸುಧೀರ್
ಕುಮಾರ್ ಶೆಟ್ಟಿ ಅವರು ಸಂಘದ ಸಮಾಜ ಸೇವೆ ಇನ್ನಷ್ಟು
ಮುಂದುವರಿಯಲಿ ಎಂದಿದ್ದಾರೆ.
ಬಿಳಿನೆಲೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ಗ್ರಾಮ
ಪಂಚಾಯಿತಿ ಸದಸ್ಯರಾದ ಮುರಳಿಧರ ಎರ್ಮಾಯಿಲ್, ನೆಟ್ಟಣ
ರೈಲ್ವೇ ಸ್ಟೇಷನ್ ಮ್ಯಾನೇಜರ್ ಸಂಜೀವ್ ರಂಜನ್, ದ.ಕ
ಜಿಲ್ಲಾ ಟ್ಯಾಕ್ಸಿಮ್ಯಾನ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಗೌಡ, ಸುಬ್ರಹ್ಮಣ್ಯ ರೋಡ್
ನೆಟ್ಟಣ ಟ್ಯಾಕ್ಸಿ ಚಾಲಕ, ಮಾಲಕರ ಸಂಘದ ಕಾನೂನು ಸಲಹೆಗಾರ ಚೇತನ್ ಕುಮಾರ್, ಕೆಟಿಡಿಸಿ ದಕ್ಷಿಣ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬಿಸಿರೋಡ್ , ಬಿಳಿನೆಲೆ
ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ, ಉಪಾಧ್ಯಕ್ಷ ಜಯಂತ್ ಆರ್ಲಡ್ಕ, ಬಿಳಿನೆಲೆ ಗ್ರಾ.ಪಂ. ಸದಸ್ಯ
ಸತೀಶ್ ಕಳಿಗೆ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಡ್ ನೆಟ್ಟಣ ಟ್ಯಾಕ್ಸಿ ಚಾಲಕ, ಮಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮ ಕೊರಗ, ಶಿವ ಕೊಡೆಂಕಿರಿ, ಪ್ರಕಾಶ್ ಕೆ,ಜಿ. ನೆಟ್ಟಣ, ಕು.ದೀಕ್ಷ,
ಅಜೀಝ್, ಯೋಧ ಪ್ರಭಾಕರ ಮೆರೊಂಜಿ, ಅನನ್ಯ ಬಿ.ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.