ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ಹಣ ಕಳ್ಳತನ :ಆರೋಪಿಯನ್ನು ವಶಕ್ಕೆ ಪಡೆದ ಸುಬ್ರಹ್ಮಣ್ಯ ಪೊಲೀಸರು

ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ಹಣ ಕಳ್ಳತನ :ಆರೋಪಿಯನ್ನು ವಶಕ್ಕೆ ಪಡೆದ ಸುಬ್ರಹ್ಮಣ್ಯ ಪೊಲೀಸರು

Kadaba Times News
0

 ಕಡಬ ಟೈಮ್ಸ್, ಸುಬ್ರಹ್ಮಣ್ಯ:   ಪಂಜ ಸಮೀಪದ   ಕರಿಕ್ಕಳದಲ್ಲಿರವ  ಅಂಗಡಿಯೊಂದರ ಶೀಟ್ ತೆಗೆದು ನಗದು ಕಳ್ಳತನ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸರು ಬೇಧಿಸಿದ್ದಾರೆ.


ಕೈಕಂಬ ಸಮೀಪದ  ಕುಂಪದವು ಗಣೇಶ್ ಎಂಬಾತನನ್ನು ವಶಕ್ಕೆ ಪಡೆದು ಸುಬ್ರಹ್ಮಣ್ಯ ಠಾಣೆಗೆ ಕರೆ ತರಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.



ಕರಿಕ್ಕಳದ   ಜತ್ತಪ್ಪ ಗೌಡ ಮೇಲ್ಮನೆ ರವರ ಅಂಗಡಿಯಲ್ಲಿ  ಜು.9 ರಂದು ರಾತ್ರಿ ಸುಮಾರು 25 ಸಾವಿರ ನಗದು ಕಳ್ಳತನ ಆಗಿತ್ತು. ಅಂದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು  .


ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರಿಗೆ ಪ್ರಮುಖ ಸಾಕ್ಷಿ ದೊರೆತಿತ್ತು. ಈ ಹಿಂದೆ ಆರೋಪಿ ಕರಿಕಳದಲ್ಲಿ ಕೆಲಸಕ್ಕೆ ಬಂದಿದ್ದ ಈ ವೇಳೆ ಅಂಗಡಿ ಬಗ್ಗೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top