




ಕಡಬ ಟೈಮ್(ಪ್ರಮುಖ ಸುದ್ದಿ)ಬಿಳಿನೆಲೆ: ರಿಕ್ಷಾ ಪಲ್ಟಿಯಾಗಿ ಅದರ ಹಿಂಬದಿ ಕುಳಿತಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜು.3ರಂದು ಬೆಳಿಗ್ಗೆ ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ನಡೆದಿದೆ.
ಕುಲ್ಕುಂದ ನಿವಾಸಿ ಸುಮಿತ್ರಾ ಗಾಯಗೊಂಡ ಪ್ರಯಾಣಿಕೆ. ರಾಜೇಶ್
ಎಂಬವರ ರಿಕ್ಷಾದಲ್ಲಿ ಕುಲ್ಕುಂದದಿಂದ ಮರ್ದಾಳಕ್ಕೆಂದು ಪ್ರಯಾಣಿಸುತ್ತಿದ್ದ ವೇಳೆ ರಿಕ್ಷಾ ಹತೋಟಿ ತಪ್ಪಿ ಪಲ್ಟಿಯಾಗಿದೆ.
ರೈಲ್ವೇ ಸ್ಟೇಷನ್ ನಿಂದ ಪ್ರಯಾಣಿಕರನ್ನು ಕರೆದುಕೊಂಡು ಬರುವ ಸಲುವಾಗಿ ನೆಟ್ಟಣ ಕಡೆ ಹೋಗುತ್ತಿರುವ ವಾಹನವನ್ನು ಕೈಕಂಬ ಕೋಟೆಸಾರು ಸೇತುವೆ ಬಳಿ ತಲುಪಿದಾಗ ಕುಲ್ಕುಂದ ರಿಕ್ಷಾ ಚಾಲಕ ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಾ ರಿಕ್ಷಾವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೈಕಂಬ ನರ್ಸರಿಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಹತೋಟಿ ತಪ್ಪಿ ರಸ್ತೆಯ ಬಲಬದಿಗೆ ಮಗುಚಿ ಬಿದ್ದಿರುವುದಾಗಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
ಘಟನೆಯಲ್ಲಿ ಪ್ರಯಾಣಿಕೆಯ ತಲೆಯ
ಬಲ ಭಾಗಕ್ಕೆ ಗಾಯವಾಗಿದ್ದು, ಚಾಲಕನ ಸೊಂಟಕ್ಕೆ
ಗುದ್ದಿದ ಗಾಯವಾಗಿದೆ. ಗಂಭೀರ
ಗಾಯಗೊಂಡಿದ್ದ ಪ್ರಯಾಣಿಕೆಯನ್ನು 108 ಆಂಬುಲೆನ್ಸ್ನಲ್ಲಿ
ಪುತ್ತೂರು ಖಾಸಗಿ ಆಸ್ಪತ್ರೆಗೆ
ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರು
ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಕುಶಾಲಪ್ಪ
ಎಂಬವರು ನೀಡಿದ ದೂರಿನಂತೆ ಕಡಬ
ಪೊಲೀಸ್ ಠಾಣಾ ಅ.ಕ್ರ 48/2025 ಕಲಂ:
281, 125 (a) BNS-2023 ಕಾಯ್ದೆ
ಯಂತೆ ಪ್ರಕರಣ ದಾಖಲಾಗಿರುತ್ತದೆ.